ಸೋಲಾರ್ ಬೇಲಿ ಪೀಸ್—ಪೀಸ್: ಆನೆ ರೋಷಾವೇಷದ ವೀಡಿಯೋ ಸಿಸಿಟಿವಿಯಲ್ಲಿ ಸೆರೆ - Mahanayaka
9:07 PM Thursday 12 - December 2024

ಸೋಲಾರ್ ಬೇಲಿ ಪೀಸ್—ಪೀಸ್: ಆನೆ ರೋಷಾವೇಷದ ವೀಡಿಯೋ ಸಿಸಿಟಿವಿಯಲ್ಲಿ ಸೆರೆ

chamarajanagar
29/01/2023

ಚಾಮರಾಜನಗರ: ಆನೆ ನಡೆದದ್ದೇ ಹಾದಿ ಎಂಬ ಮಾತನ್ನು ಈ ವೀಡಿಯೋ ನೋಡಿದ ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು‌. ಆನೆಯೊಂದು ಸೋಲಾರ್ ಬೇಲಿಯನ್ನು ಪುಡಿಗಟ್ಟಿ ಮುಂದೆ ನುಗ್ಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಚಾಮರಾಜನಗರ ಗಡಿ ಪ್ರದೇಶವಾದ ತಮಿಳುನಾಡಿನ‌ ತಾಳವಾಡಿ ಸಮೀಪ ಮರಿಯಪುರ ಗ್ರಾಮದ ಮಹೇಶ್ ಎಂಬವರ ತೋಟಕ್ಕೆ ಬಂದ ಒಂಟಿ ಆನೆಯೊಂದು ಸೋಲಾರ್ ಬೇಲಿಯನ್ನು ಒಂದೇ ಏಟಿಗೆ ಪುಡಿಗಟ್ಟಿ ತೋಟದೊಳಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದೆ.

ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಳೆ ರಕ್ಷಣೆಗೆಂದು ಹಾಕಿದ್ದ ಸೋಲಾರ್ ಬೇಲಿ ಆನೆ ಮುಂದೆ ನೆಲಕಚ್ಚಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ