ಮುಂಜಾನೆಯಿಂದಲೇ ಸೋಮಣ್ಣ ಮತಬೇಟೆ: ಸಿಎಂ ಆಗ್ಬೇಕೆಂದರೇ ಏನು ಏನ್ ಮಾಡ್ಬೇಕು ಎಂದ ಬಾಲಕ!?
ಚಾಮರಾಜನಗರ: ಮಾರ್ನಿಂಗ್ ವಾಕ್ ನಿಂದಲೇ ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಮತಬೇಟೆ ಆರಂಭ ಮಾಡಿದ್ದು, ವಾಯುವಿಹಾರಿಗಳು, ಟೀ ಅಂಗಡಿಗಳಿಗೆಲ್ಲಾ ತೆರಳಿ ಮತ ಶಿಕಾರಿ ನಡೆಸಿದ್ದಾರೆ.
ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ ಎದುರಾದ ಬಾಲಕನೋರ್ವ ಸಿಎಂ ಆಗೋಕೆ ಏನ್ ಮಾಡ್ಬೇಕು ಅಂತಾ ಸೋಮಣ್ಣರನ್ನು ಪ್ರಶ್ನಿಸಿದ್ದಾನೆ.
ನೀನು ಏನು ಮಾಡ್ಬೇಡ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲಾ ಲೆಕ್ಕ ಇಲ್ಲ ನೀನೆ ದೊಡ್ಡ ಸಿಎಂ, ಚೆನ್ನಾಗಿ ಓದು, ಸ್ಪೋರ್ಟ್ಸ್ ಆಕ್ಟಿವಿಟಿಯಲ್ಲಿರು, ಬಾಕಿದೆಲ್ಲಾ ಬಿಟ್ಬಿಡು, ನಿನ್ನ ಹಣೆಯಲ್ಲಿದ್ರೆ ಬರ್ತೀಯಾ ಹೋಗು ಎಂದು ಸೋಮಣ್ಣ ಹೇಳಿದ್ದಾರೆ.
ನಂಗೆ ಪಾರ್ಟಿ ತಾಯಿ, ಅಷ್ಟಕ್ಕೆ ಇಷ್ಟಕ್ಕೆ ಅಲ್ಲ. ನೀನೊಬ್ಬ ಬದಲಾವಣೆಯಾಗು. ಬದಲಾವಣೆಯಾಗದಿದ್ರೆ ನಿಮಗೆ ನಷ್ಟವಾಗೋದು. ಒಳ್ಳೆಯದಕ್ಕೆ ನಾನು ಪ್ರಾಣ ಕೊಡ್ತೀನಿ. ಕೆಟ್ಟವರಿಗೆ ಮಾತ್ರ ಬಿಡೋದಿಲ್ಲ. ದಯಮಾಡಿ ಕೆಲಸ ಮಾಡಿ. 10 ವರ್ಷದಿಂದ ಅವರೇನೂ ಮಾಡಿಲ್ಲ. ಸರಿ ಹಾಗಾದ್ರೆ ನಾವೇನೂ ಕೆಲಸ ಮಾಡಿದ್ದೀವಿ. ನಮ್ಮ ಸರ್ಕಾರವಿದ್ದಾಗಲೂ ಏನು ಮಾಡಿಲ್ಲವೆಂದು ಸ್ಟೇಡಿಯಂ ಅವ್ಯವಸ್ಥೆ ನೋಡಿ ಬಿಜೆಪಿ ಮುಖಂಡರಿಗೆ ಸೋಮಣ್ಣ ಚಾಟಿ ಬೀಸಿದರು.
ಇನ್ನು, ಎರಡನೇ ದಿನದ ಮತಪ್ರಚಾರ ನಡೆಸುತ್ತಿರುವ ಸಚಿವ ಸೋಮಣ್ಣ ಇಂದು ಕೂಡ 18 ಕ್ಕೂ ಹೆಚ್ಚು ಊರುಗಳಿಗೆ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿ ಮಾಡುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw