ಏಜ್ ಆದ್ಮೇಲೆ ಎಲ್ಲರೂ ವಿದಾಯ ಹೇಳಬೇಕಲ್ವಾ…! | ಬಿಎಸ್ ವೈ ರಾಜಕೀಯ ವಿದಾಯಕ್ಕೆ ಸೋಮಣ್ಣ ಪ್ರತಿಕ್ರಿಯೆ
ಚಾಮರಾಜನಗರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವರ್ಚಸ್ಸು ಬಿಜೆಪಿಯಲ್ಲಿ ಹಿಂದಿನಂತೆಯೇ ಇದ್ದರೂ ಕೂಡ ಅವರು ರಾಜಕೀಯ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ಹೈಕಮಾಂಡ್ ಒತ್ತಡದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿ ಬಂದಿವೆ. ಈ ನಡುವೆ ಬಿಜೆಪಿ ನಾಯಕರು ಬಿಎಸ್ ವೈ ನಿವೃತ್ತಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
ಯಡಿಯೂರಪ್ಪನವರ ನಿವೃತ್ತಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಚಿವ ಸೋಮಣ್ಣ ಏಜ್ ಆದಮೇಲೆ ಎಲ್ಲರೂ ವಿದಾಯ ಹೇಳಬೇಕಲ್ವಾ ಎಂದಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಏಜ್ ಆದಮೇಲೆ ಎಲ್ಲರೂ ವಿದಾಯ ಹೇಳಬೇಕಲ್ವಾ..,ಈ ದೇಶದಲ್ಲಿ ಬಹುತೇಕರು ಬಂದು ಹೋಗಿದ್ದಾರೆ, ನಾವು ವಿದಾಯ ಹೇಳಬೇಕು, ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.
ಬಿಜೆಪಿಯ ಯುವ ನಾಯಕರಿಗಿಂತಲೂ ಉತ್ಸಾಹದಿಂದ ಓಡಾಡುತ್ತಿರುವ ಬಿಎಸ್ ವೈ ಉಳಿದ ಬಿಜೆಪಿ ನಾಯಕರಿಗಿಂತಲೂ ಹೆಚ್ಚು ಯುವಕರಂತೆ ಕಾಣುತ್ತಾರೆ. ಬಿಎಸ್ ವೈ ಇಲ್ಲದೇ ಈ ಬಾರಿ ಬಿಜೆಪಿ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸಲಿದೆ. ಮುಂದೇನಾಗಲಿದೆ ಅನ್ನೋ ಕುತೂಹಲದ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw