ಸೋಮಣ್ಣಗೆ ಟ್ರಬಲ್ ಶೂಟರ್ ಆದ ಪತ್ನಿ ಶೈಲಜಾ | ಪುಟ್ಟರಂಗಶೆಟ್ಟಿ ಪರ ಫೀಲ್ಡ್ ಗಿಳಿದ ಪುತ್ರಿಯರು!
ಚಾಮರಾಜನಗರ: ಚಾಮರಾಜನಗರದಲ್ಲಿ ಪತಿ ಸೋಮಣ್ಣ ಪರವಾಗಿ ಅವರ ಪತ್ನಿ ಶೈಲಜಾ ಪ್ರಚಾರಕ್ಕೆ ಇಳಿದಿದ್ದಾರೆ. ವಿವಿಧ ಗ್ರಾಮಕ್ಕೆ ತೆರಳಿರುವ ಶೈಲಜಾ ಅವರು ಪತಿಯ ಪರವಾಗಿ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಜೊತೆಗೆ ಅಸಮಾಧಾನಿತರನ್ನು ಭೇಟಿಯಾಗಿ ಮನವೊಲಿಸುತ್ತಿದ್ದಾರೆ.
ಇನ್ನೊಂದೆಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪರ ಅವರ ಹೆಣ್ಣು ಮಕ್ಕಳು ಪ್ರಚಾರಕ್ಕೆ ಇಳಿದಿದ್ದಾರೆ. ಶೀಲಾ ಹಾಗೂ ವೇದಾವತಿ ವಿವಿಧೆಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸತತ ನಾಲ್ಕನೇ ಬಾರಿ ಸ್ಪರ್ಧೆ ಮಾಡಿರುವ ಪುಟ್ಟರಂಗಶೆಟ್ಟಿ, ಈ ಬಾರಿ ಸೋಮಣ್ಣ ಅವರಿಂದ ಪ್ರಬಲ ಪೈಪೋಟಿ ಇರುವ ಕಾರಣ ಪುತ್ರಿಯರು ಪ್ರಚಾರಕ್ಕಿಳಿದಿದ್ದಾರೆ.
ಚುನಾವಣಾ ಫೀಲ್ಡ್ ಗಿಳಿದ ಪುಟ್ಟರಂಗಶೆಟ್ಟಿಯ ಪುತ್ರಿಯರು, ಮನೆಮನೆಗೆ ತೆರಳಿ ತಂದೆ ಪರ ಪ್ರಚಾರ ಮಾಡುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw