ಸೌದಿಯಲ್ಲಿ ದುಡಿಯುತ್ತಿರುವ ವಿದೇಶಿಯರಿಗೆ ಹಜ್ ನಿರ್ವಹಿಸುವುದಕ್ಕೆ ಕೆಲವು ನಿಬಂಧನೆ: ಸೌದಿ ಸರ್ಕಾರ ಹೇಳಿಕೆ

12/02/2025

ಸೌದಿಯಲ್ಲಿ ದುಡಿಯುತ್ತಿರುವ ವಿದೇಶಿಯರಿಗೆ ಹಜ್ ನಿರ್ವಹಿಸುವುದಕ್ಕೆ ಕೆಲವು ನಿಬಂಧನೆಗಳನ್ನು ಸೌದಿ ಸರ್ಕಾರ ಘೋಷಿಸಿದೆ. ಇವರ ಇಕಾಮಕ್ಕೆ ದುಲ್ಹಜ್ ಹತ್ತರವರೆಗಿನ ಅವಧಿ ಇರಬೇಕಾಗಿದೆ. ಜಂಟಿ ಪ್ಯಾಕೇಜಿನಡಿಯಲ್ಲಿ ರಿಜಿಸ್ಟ್ರೇಷನ್ ಮಾಡಬೇಕಾಗಿದೆ. ಒಟ್ಟಿಗೆ ಬರುವವರ ಮಾಹಿತಿಯನ್ನು ರಿಜಿಸ್ಟ್ರೇಷನ್ ಸಮಯದಲ್ಲಿ ನೀಡಬೇಕಾಗಿದೆ. ಒಟ್ಟಿಗೆ 14 ಮಂದಿಗೆ ಅವಕಾಶ ಇದೆ.

ಮೊದಲೇ ರಿಸರ್ವೇಶನ್ ಮಾಡಬಹುದು. ರಿಜಿಸ್ಟ್ರೇಷನ್ ವೇಳೆ ಸುಳ್ಳು ಮಾಹಿತಿಯನ್ನು ನೀಡಬಾರದು.
ಹಜ್ ಪ್ರಕ್ರಿಯೆ ಆರಂಭವಾದ ಬಳಿಕ ರಿಸರ್ವೇಶನ್ ರದ್ದು ಮಾಡಿದರೆ ಕಟ್ಟಿದ ಹಣ ಮರಳಿಸಲಾಗುವುದಿಲ್ಲ. ಸಂಬಂಧಪಟ್ಟ ಇಲಾಖೆಗಳು ನಿರ್ದೇಶನ ನೀಡುವ ಆರೋಗ್ಯ ಮತ್ತು ಇನ್ನಿತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ನುಸುಕ್ ಪೋರ್ಟಲ್ ಮತ್ತು ಅಪ್ಲಿಕೇಶನ್ ನ ಮೂಲಕ ಹಜ್ ಪರ್ಮಿಟ್ ಪ್ರಿಂಟ್ ಮಾಡಿ ಜೊತೆ ಇಟ್ಟುಕೊಳ್ಳಬೇಕು. ಹಜ್ ನ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಇರುವ ಪರ್ಮಿಟ್ ಕೈಯಲ್ಲಿರಬೇಕು. ಇತರರಿಗೆ ಅದನ್ನು ಉಪಯೋಗಿಸಲು ಅನುಮತಿಸಬಾರದು. ಉಳಿದ ಹಜ್ ಶುಲ್ಕವನ್ನು ಡಿಜಿಟಲ್ ಮೂಲಕ ಪಾವತಿಸಬೇಕು.

 

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version