ತಾಯಿ ನೆನಪಿನಲ್ಲಿ ‘ತಾಜ್ ಮಹಲ್’ ನಿರ್ಮಿಸಿದ ಮಗ..!
ಅದು ಪ್ರೀತಿಯ ಮಡದಿಗಾಗಿ ಕಟ್ಟಿಸಿದ ತಾಜ್ ಮಹಲ್.
ಇದು ಪ್ರೀತಿಯ ತಾಯಿಯ ನೆನಪಿನಲ್ಲಿ ಕಟ್ಟಿಸಿದ ತಾಜ್ ಮಹಲ್.
ತಾಯಿ ಪ್ರೀತಿಯನ್ನು ವರ್ಣಿಸಲು ಅಸಾಧ್ಯ.
ಹೌದು…
ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ.
ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ. ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.
ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕವಾಗಿದೆ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw