ಎಸೆಸೆಲ್ಸಿ ಫಲಿತಾಂಶ: ದಲಿತ ಕಾರ್ಮಿಕನ ಪುತ್ರ ರಾಜ್ಯಕ್ಕೆ ಟಾಪರ್ | ಅಮಿತ್ ನ ಸಾಧನೆಯ ಹಿಂದಿದ್ದ ಕಷ್ಟಗಳೇನು?
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಪೈಕಿ ಟಾಪರ್ ಗಳಲ್ಲಿ ಒಬ್ಬರಾಗಿರುವ ಬಡ ದಲಿತ ಕುಟುಂಬದ ಅಮಿತ್ ಮಾದಾರ್(Amit Madar) ಅವರ ಸಾಧನೆ ಅವರ ಊರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲ ಇಡೀ ರಾಜ್ಯವೇ ಖುಷಿ ಪಡುವ ವಿಚಾರ ಕೂಡ ಆಗಿದೆ.
ಹುಬ್ಬಳ್ಳಿ-ವಿಜಯಪುರ ರಸ್ತೆಯಿಂದ ವಿಜಯಪುರ ನಗರದ ದಕ್ಷಿಣಕ್ಕೆ 10 ಕಿ.ಮೀ. ದೂರದಲ್ಲಿರುವ ಜುಮನಾಳ್ ಗ್ರಾಮದ ಅಮಿತ್, ಬಡ ಕೃಷಿ ಕುಟುಂಬದವರಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ಅಮಿತ್ ಗೆ ಅವರ ತಾಯಿಯೇ ಶಕ್ತಿಯಾಗಿದ್ದರು. ಅಮಿತ್ ಅವರ ತಾಯಿ ಕೃಷಿ ಕೂಲಿ, ದೈನಂದಿನ ಕೂಲಿ ಕೆಲಸಗಳನ್ನು ನಿರ್ವಹಿಸುತ್ತ ತನ್ನ ಮೂವರು ಮಕ್ಕಳಿಗೂ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡಲು ಕಠಿಣ ಪರಿಶ್ರಮವಹಿಸಿದರು. ಇಂದು ತಾಯಿಯ ಪರಿಶ್ರಮವನ್ನು ಅಮಿತ್ ವ್ಯರ್ಥವಾಗಲು ಬಿಡಲಿಲ್ಲ.
ಮೂವರು ಮಕ್ಕಳಲ್ಲಿ ಅಮಿತ್ ಕಿರಿಯ. ಅವರ ಸಹೋದರಿ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಸಹೋದರ ಪದವಿ ಕೋರ್ಸ್‌ನ ಎರಡನೇ ವರ್ಷ ಓದುತ್ತಿದ್ದಾರೆ ಮತ್ತು ಪುಸ್ತಕದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ವಿಜಯಪುರ ಜಿಲ್ಲೆಯ ಜುಮನಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಅಮಿತ್ 2022ರ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ಟಾಪರ್ಸ್ ಗಳಲ್ಲಿ ಒಬ್ಬರಾಗಿದ್ದಾರೆ. ಟಾಪರ್ಸ್ ಆಗಿ ಹೊರ ಹೊಮ್ಮಿರುವುದು ಅಮಿತ್ ಗೆ ಸಂತಸ ತಂದಿದೆ. ಆದರೆ ಇದು ಅನಿರೀಕ್ಷಿತವೇನಲ್ಲ, ಕಲಿಕೆಯಲ್ಲಿ ಯಾವಾಗಲೂ ಅಮಿತ್ ಮೇಲುಗೈ ಸಾಧಿಸಿದ್ದರು. 8ನೇ ತರಗತಿಯಲ್ಲಿರುವಾಗ ಅಮಿತ್ 625ರಲ್ಲಿ 625 ಅಂಕಗಳನ್ನು ತೆಗೆಯ ಬೇಕು ಎನ್ನುವ ಗುರಿಯಿಟ್ಟು ಕಠಿಣ ಪರಿಶ್ರಮದೊಂದಿಗೆ 625 ಅಂಕಗಳನ್ನು ಗಳಿಸಿದ್ದರು. ಇದೀಗ ಎಸೆಸೆಲ್ಸಿಯಲ್ಲಿ ಕೂಡ ಇದೇ ಸಾಧನೆಯನ್ನು ಅಮಿತ್ ಮೆರೆದಿದ್ದಾರೆ.
ಓದುವ ವಿಚಾರಕ್ಕೆ ಬಂದರೆ, ಅಮಿತ್, “ಪುಸ್ತಕದ ಹುಳು”. ಸಣ್ಣ ವಯಸ್ಸಿನಲ್ಲೇ ಕುಟುಂಬದ ಕಷ್ಟಗಳನ್ನು ನೋಡಿ ಬೆಳೆದ ಅಮಿತ್ ಗೆ ನಾನು ಚೆನ್ನಾಗಿ ಓದಿ ಉತ್ತಮ ಅಂಕಗಳಿಸಿ, ಉತ್ತಮ ಉದ್ಯೋಗವನ್ನು ಪಡೆದು ತನ್ನ ಕುಟುಂಬವನ್ನು ಬಡತನದಿಂದ ಹೊರ ತರಬೇಕು ಎನ್ನುವ ಆಸೆಯಿತ್ತು. ಇದಕ್ಕಾಗಿ ಅವರು ತಮ್ಮ ಬಾಲ್ಯದ ಎಲ್ಲ ಆಸೆಗಳನ್ನು ತೊರೆದು, ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು.
ಕೊವಿಡ್ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಆನ್ ಲೈನ್ ಕ್ಲಾಸ್ ನಡೆಸಲು ಸೂಚನೆ ನೀಡಿತ್ತು. ಜುಮನಾಲ್ ನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಆನ್ ಲೈನ್ ತರಗತಿಗಳನ್ನು ನಡೆಸಿದಾಗ ಅಮಿತ್ ಬಳಿಯಲ್ಲಿ ಸ್ಮಾರ್ಟ್ ಫೋನ್ ಇರಲಿಲ್ಲ. ಈ ಸಂದರ್ಭದಲ್ಲಿ ಅವರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಫೋನ್ ಗಳನ್ನು ಪಡೆದುಕೊಂಡು ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು.
ಈ ಬಗ್ಗೆ ದಿ ಹಿಂದೂ ಪತ್ರಿಕೆಯ ಜೊತೆಗೆ ಮಾತನಾಡಿದ ಅಮಿತ್, ನಾನು ದಿನಕ್ಕೆ ಆರರಿಂದ 8 ಗಂಟೆಗಳ ಕಾಲ ಓದುತ್ತಿದೆ. ನನ್ನ ಮನಸ್ಸನ್ನು ಚಂಚಲವಾಗಲು ನಾನು ಬಿಡಲಿಲ್ಲ. ನನ್ನ ಗುರಿ ಶೇ.100ರಷ್ಟು ಅಂಕಗಳನ್ನು ಗಳಿಸುವುದಾಗಿತ್ತು. ಇದೀಗ ನಾನು ಅದನ್ನು ಸಾಧಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ, ನನ್ನ ಈ ಸಾಧನೆಗೆ ನಮ್ಮ ಶಾಲೆಯ ಶಿಕ್ಷಕರು ನನಗೆ ಸಹಾಯ ಮಾಡಿದರು ಎಂದು ಅಮಿತ್ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಕ್ಕೆ ಮುಖ್ಯೋಪಾಧ್ಯಾಯಿನಿ ಅರೆಸ್ಟ್!
ಕೊಚ್ಚಿ ಮೆಟ್ರೋ ಇನ್ನು ಮುಂದೆ ಮದುವೆ ಫೋಟೋಶೂಟ್ ಗೆ ಲಭ್ಯ!
ಜೂನ್ 9 ರಿಂದ ಪಿಯು ತರಗತಿ ಆರಂಭ: ಸಮವಸ್ತ್ರ ಕಡ್ಡಾಯ!
ಮತ್ತೆ ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ: ಗಾಯದ ಮೇಲೆ ಬರೆ!
ಪೊಲೀಸರೇ ಅಪರಾಧದಲ್ಲಿ ಭಾಗಿಯಾದರೆ ಸಾರ್ವಜನಿಕರ ರಕ್ಷಣೆ ಹೇಗೆ?: ಅರಗ ಜ್ಞಾನೇಂದ್ರ ಪ್ರಶ್ನೆ