ಡ್ರಗ್ಸ್ ವ್ಯಸನಿಯಾಗಿದ್ದ ಮಗ: ಹೆತ್ತ ಕರುಳನ್ನೇ ಕೊಂದ ಪುತ್ರ
ಡ್ರಗ್ಸ್ ಎಡಿಕ್ಟ್ ಆಗಿದ್ದ ಮಗ ತನ್ನ ತಂದೆಯನ್ನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಸೌದಿ ಅರೇಬಿಯಾದ ಜುಬೇಲ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಶ್ರೀ ಕೃಷ್ಣ ಬ್ರಿಜ್ನಾಥ್ ಯಾದವ್ ಎಂಬವರು ಪ್ರಮುಖ ಕಂಪನಿಯಲ್ಲಿ ಸೆಕ್ಯೂರಿಟಿ ಅಂಡ್ ಸೇಫ್ಟಿ ಟೆಕ್ನಿಷಿಯನ್ ಆಗಿ ದುಡೀತಾ ಇದ್ರು. ಊರಲ್ಲಿದ್ದ ಮಗ ಕುಮಾರ್ ಯಾದವ್ ಮಾದಕ ವ್ಯಸನಕ್ಕೆ ತುತ್ತಾಗಿರುವುದನ್ನು ಕಂಡು ಆತನನ್ನು ಸುಧಾರಿಸುವುದಕ್ಕಾಗಿ ಒಂದೂವರೆ ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ಕರಕೊಂಡು ಬಂದಿದ್ದರು.
ಆದರೆ ಸಮಯಕ್ಕೆ ಸರಿಯಾಗಿ ಡ್ರಗ್ಸ್ ಸಿಗದ ಕಾರಣದಿಂದ ಮಗ ನಿದ್ದೆ ಕಳಕೊಂಡನಲ್ಲದೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದ. ಇದೀಗ ಆತ ತನ್ನ ತಂದೆಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದಾನೆ. ಮಾತ್ರವಲ್ಲ ತಂದೆಯ ಕಣ್ಣನ್ನು ಕಿತ್ತು ಎಸೆದಿದ್ದಾನೆ ಮತ್ತು ಅವರ ದೇಹದ ಮೇಲೆ ಮನಸೋ ಇಚ್ಛೆ ಗಾಯಗಳನ್ನು ಮಾಡಿದ್ದಾನೆ. ಇದೀಗ ತಂದೆಯ ದೇಹವನ್ನು ಆಸ್ಪತ್ರೆಯಲ್ಲಿ ಕಾಪಿಡಲಾಗಿದೆ ಎಂದು ಗೊತ್ತಾಗಿದೆ. ಈ ಘೋರ ಕೃತ್ಯವು ಜುಬೇಲ್ ನ ಪ್ರತಿಯೊಬ್ಬರನ್ನೂ ಆಘಾತಕ್ಕೆ ಒಳಪಡಿಸಿದೆ.
ಭಾರತೀಯರು ಪರಸ್ಪರ ಮುಖಾಮುಖಿಯಾಗುವಾಗ ಈ ಹತ್ಯೆಯ ಬಗ್ಗೆ ಮಾತಾಡುತ್ತಿದ್ದಾರೆ, ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj