ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು - Mahanayaka

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

sonia gandhi
12/06/2022

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೊವಿಡ್  ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು,  ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.


Provided by

ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ಅವರನ್ನು ದಾಖಲಿಸಲಾಗಿದ್ದು,  ಅವರ ಆರೋಗ್ಯ ಸ್ಥಿರವಾಗಿದ್ದು, ಅವರ ಆರೋಗ್ಯದ ಕುರಿತು ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಇಂದು ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ರಣದೀಪ್ ಸುರ್ಜೇವಾಲ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.


Provided by

ಜೂನ್ ಒಂದರಂದು ಸೋನಿಯಾ ಗಾಂಧಿ ಅವರಿಗೆ ಕೊವಿಡ್ ಸೋಂಕು ತಗಲಿತ್ತು. ಜೂನ್ 8 ರಂದು ಜಾರಿ ಇಡಿ ಮುಂದೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಕೋವಿಡ್ ಸೋಂಕು ದೃಢವಾದ ಕಾರಣ ಜೂನ್ 23 ರಂದು ಹಾಜರಾಗಲು ಇಡಿ ಹೇಳಿದೆ. ಜೂ.13ರಂದು ನ್ಯಾಶನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗೆ ರಾಹುಲ್ ಗಾಂಧಿ ಮಾತ್ರ ಹಾಜರಾಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಂದುವರಿದ ತಿಥಿ ಕಾರ್ಡ್ ಫೈಟ್: ಕುಮಾರಸ್ವಾಮಿ ಹೆಸರಿನ ಕೈಲಾಸ ಸಮಾರಾಧನೆ ಚಿತ್ರ ವೈರಲ್!

ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ!

ಭಾರತ-ಬಾಂಗ್ಲಾದೇಶಕ್ಕೆ ಅಂತರ್ದೇಶಿಯ ಬಸ್ ಸೇವೆ ಪುನರಾರಂಭ

ಮದುವೆ ಸಂಭ್ರಮದಲ್ಲಿದ್ದ ಜೋಡಿಯ ನೆಮ್ಮದಿ ಕೆಡಿಸಿದ ಸಂಪ್ರದಾಯವಾದಿಗಳು!

ಇತ್ತೀಚಿನ ಸುದ್ದಿ