ಬಿಗ್ ಬಾಸ್ ಮನೆ ಎಂಟ್ರಿಗೆ ಕೊಟ್ಟ ಸೋನು ಶ್ರೀನಿವಾಸ್ ಗೌಡ
ಬಿಗ್ ಬಾಸ್ ಒಟಟಿಯ ಮೊದಲ ಸೀಸನ್ ಗೆ ಇನ್ ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿರುವ ಸೋನು ಶ್ರೀನಿವಾಸ ಗೌಡ ಆಯ್ಕೆಯಾಗಿದ್ದು, ಇಂದು ಎರಡನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಸಂಬಂಧಿಸಿದಂತೆ ಹಲವು ವಿವಾದಗಳಿಗೆ ಸುದ್ದಿಯಾಗಿದ್ದ ಸೋನು ಶ್ರೀನಿವಾಸ ಗೌಡ, ರೀಲ್ಸ್ ಮಾಡುವುದನ್ನು ಬಿಡಲಿಲ್ಲ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಇನ್ನೂ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು, ಬಿಗ್ ಬಾಸ್ ಗೆ ಆಯ್ಕೆಯಾಗಿದ್ದಕ್ಕೆ ಹೇಗನಿಸ್ತಿದೆ ಎಂಬ ಪ್ರಶ್ನೆಗೆ ತುಂಬಾ ಖುಷಿಯಾಗಿದೆ, ಖುಷಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಬಿಗ್ ಬಾಸ್ ಮನೆಗೆ ಬರಲು ಎಷ್ಟು ಪ್ರಿಪೇರ್ ಆಗಿದ್ದೀರಿ? ಎಂಬ ಪ್ರಶ್ನೆಗೆ, ಪ್ರಿಪರೇಶನ್ ಆಗಿಲ್ಲ, ಆನ್ ಸ್ಪಾಟ್ ನಲ್ಲೇ ಮಾತಾಡ್ತೀನಿ ಅಂದ್ರು. ಅದು ಗೊತ್ತು ನಮಗೆ ಎಂದು ಕಿಚ್ಚ ಸುದೀಪ್ ಕಾಲೆಳೆದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka