ನಟ ಸೋನುಸೂದ್ ಅವರಿಂದ 20 ಕೋಟಿಗೂ ಅಧಿಕ ತೆರಿಗೆ ವಂಚನೆ!

ಮುಂಬೈ: ನಟ ಸೋನುಸೂದ್ ಅವರು 20 ಕೋಟಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖಾ ಅಧಿಕಾರಿ ಹೇಳಿದ್ದು, ಸೋನುಸೂದ್ ಅವರಿಗೆ ಸೇರಿದ 28 ಕಚೇರಿಗಳ ಮೇಲೆ ದಾಳಿ ನಡೆಸಿದ ಬಳಿಕ ಐಟಿ ಇಲಾಖೆ ಈ ಮಾಹಿತಿಯನ್ನು ನೀಡಿದೆ ಎಂದು ವರದಿಯಾಗಿದೆ.
ಮೂರು ದಿನಗಳ ಹಿಂದೆ ನಟ ಸೋನುಸೂದ್ ಅವರಿಗೆ ಸೇರಿದ ಮುಂಬೈನಲ್ಲಿರುವ ಮನೆ ಸೇರಿದಂತೆ ಒಟ್ಟು 28 ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಇದುವರೆಗೆ ನಟನ ಆಸ್ತಿಗಳ ಬಗ್ಗೆ ನಡೆಸಿದ ತನಿಖೆಯಲ್ಲಿ 20 ಕೋಟಿ ರೂಪಾಯಿಗಳಿಗೂ ಅಧಿಕ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಕಳೆದ ಲಾಕ್ ಡೌನ್ ಅವಧಿಯಲ್ಲಿ ನಟ ಸೋನುಸೂದ್ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಜನರಿಗೆ ನೆರವಾಗಿದ್ದರು.
ನಟ ಸೋನುಸೂದ್ ಎಎಪಿ ಜೊತೆಗೆ ಗುರುತಿಸಿಕೊಂಡಿರುವುದೇ ಈ ಐಟಿ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಸೋನುಸೂದ್ ಮೇಲಿನ ದಾಳಿಯ ಹಿಂದೆ ರಾಜಕೀಯ ಕಾರಣಗಳಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೀಡಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ನಟ ದರ್ಶನ್ ಫಾರಂ ಹೌಸ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ!
ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!
ಭಯಾನಕ ಘಟನೆ: ಜೋಡಿಯನ್ನು ದೆಹಲಿಯಿಂದ ಅಪಹರಿಸಿ, ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಎಸೆದ ಪಾಪಿಗಳು
ರಾತ್ರೋ ರಾತ್ರಿ ಇಬ್ಬರು ಹುಡುಗರ ಖಾತೆಗೆ ಜಮಾ ಆಯಿತು 900 ಕೋಟಿಗೂ ಅಧಿಕ ಹಣ!
ಬಿಗ್ ಬ್ರೇಕಿಂಗ್ ನ್ಯೂಸ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ