ಸೋನು ಕೇಸ್: ಮಗುವನ್ನು ಮಾರಾಟ ಮಾಡಿಲ್ಲ, ದತ್ತು ನೀಡಿಲ್ಲ ಎಂದ ಮಗುವಿನ ಪಾಲಕರು!

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತುಪಡೆದುಕೊಂಡ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇದೀಗ ಜೈಲು ಸೇರಿದ್ದಾರೆ. ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿದೆ.
ಈ ನಡುವೆ ಬಾಲಕಿಯ ಪೋಷಕರು ನೀಡಿರುವ ಹೇಳಿಕೆಯಿಂದ ಸೋನು ಗೌಡ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ‘ನಾವು ಮಗುವನ್ನು ಮಾರಾಟ ಮಾಡಿಲ್ಲ’ ಎಂದು ಪಾಲಕರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರಿಗೆ ಪೊಲೀಸರು ಸಮನ್ಸ್ ನೀಡಿದ್ದರು. ಪೊಲೀಸರ ಎದುರು ಬಾಲಕಿಯ ಪಾಲಕರು ಹಾಜರಾಗಿದ್ದು, ಸೋನು ಗೌಡ ಅವರನ್ನು ಮಗು ಹಚ್ಚಿಕೊಂಡಿತ್ತು. ಅನಾರೋಗ್ಯ ಉಂಟಾದಾಗ ಸೋನು ಸೋನು ಅಂತ ಕನವರಿಸಿತ್ತು. ಒಂದೆರಡು ದಿನ ಜೊತೆ ಇರಲಿ ಎಂದು ಕಳುಹಿಸಿದ್ದೇವು. ನಾವು ಮಗುವನ್ನು ಸೋನುಗೆ ಮಾರಾಟ ಮಾಡಿಲ್ಲ ಎಂದು ಬ್ಯಾಡರಹಳ್ಳಿ ಪೊಲೀಸರ ಮುಂದೆ ಮಗು ಪಾಲಕರು ಹೇಳಿಕೆ ನೀಡಿದ್ದಾರೆ.
ಮಗುವಿನ ಪಾಲಕರು ರಾಯಚೂರು ಮೂಲದವರಾಗಿದ್ದು, ರಾಯಚೂರಿನಲ್ಲಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಪೊಲೀಸರ ಮುಂದೆ ಸೋನು ದತ್ತುಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth