ನಟ ಚಂದನ್ ಕುಮಾರ್ ಗೆ ಶೂಟಿಂಗ್ ವೇಳೆ ತಂತ್ರಜ್ಞರಿಂದ ಕಪಾಳ ಮೋಕ್ಷ! - Mahanayaka

ನಟ ಚಂದನ್ ಕುಮಾರ್ ಗೆ ಶೂಟಿಂಗ್ ವೇಳೆ ತಂತ್ರಜ್ಞರಿಂದ ಕಪಾಳ ಮೋಕ್ಷ!

chandan kumar
01/08/2022

ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟ ಚಂದನ್ ಕುಮಾರ್ ಅವರಿಗೆ ಶೂಟಿಂಗ್ ವೇಳೆ ತಂತ್ರಜ್ಞರು ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾವಿತ್ರಮ್ಮ ಗಾರಿ ಅಬ್ಬಾಯಿ ಎಂಬ ತೆಲುಗು ಧಾರವಾಹಿ ಶೂಟಿಂಗ್ ವೇಳೆ ಚಂದನ್ ಕುಮಾರ್ ಹಾಗೂ ತಂತ್ರಜ್ಞರ ನಡುವೆ ಘರ್ಷಣೆ ಉಂಟಾಗಿದ್ದು, ತಂತ್ರಜ್ಞರ ಗುಂಪು ಚಂದನ್ ನನ್ನು ಸುತ್ತುವರೆದು ತರಾಟೆಗೆತ್ತಿಕೊಳ್ಳುತ್ತಿದ್ದ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ಚಂದನ್ ಗೆ ಕಪಾಳ ಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕನ್ನಡ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಚಂದನ್ ಕುಮಾರ್ ಧಾರಾವಾಹಿ ಪ್ರಿಯರ ನೆಚ್ಚಿನ ನಟ ಕೂಡ ಆಗಿದ್ದಾರೆ. ತೆಲುಗಿನಲ್ಲೂ ನಟಿಸಿರುವ ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಈ ಘಟನೆ ನಡೆದು ಬಹಳಷ್ಟು ದಿನಗಳಾಗಿವೆ ಎನ್ನಲಾಗಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.

ಚಂದನ್ ಹಾಗೂ ತಂತ್ರಜ್ಞರ ನಡುವೆ ಯಾವ ಕಾರಣಕ್ಕಾಗಿ ಈ ಗಲಾಟೆ ನಡೆಯಿತು ಅನ್ನೋದು ತಿಳಿದು ಬಂದಿಲ್ಲ. ಚಂದನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಸ್ಥಳದಲ್ಲೇ ಇತರ ತಂತ್ರಜ್ಞರು ತರಾಟೆಗೆತ್ತಿಕೊಂಡಿರುವುದು ಕೂಡ ವಿಡಿಯೋದಲ್ಲಿ ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ