ಸೊಸೆಯಿಂದಲೇ ಅತ್ತೆಯ ಕೊಲೆ

crime sose
24/01/2022

ಚಳ್ಳಕೆರೆ: ಕ್ಷುಲ್ಲಕ ಕಾರಣಕ್ಕೆ ಸೊಸೆಯೇ ಅತ್ತೆಯನ್ನು ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ರುದ್ರಮ್ಮ (60) ಕೊಲೆಯಾದ ಮಹಿಳೆ. ಇವರ ಸೊಸೆ ಮುದ್ದಕ್ಕ ಕೊಲೆ ಮಾಡಿರುವ ಆರೋಪಿಯಾಗಿದ್ದಾಳೆ. ಸೋಮಗುದ್ದು ಗ್ರಾಮದ ಮುದ್ದಕ್ಕಳನ್ನು ರುದ್ರಮ್ಮ ಅವರ ಪುತ್ರ ಸಂಪತ್‌ಕುಮಾರ್ ಜೊತೆ ಹಲವು ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು.

ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಈ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಮಲಗಿದ್ದ ರುದ್ರಮ್ಮ ಅವರ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.ಈ ಘಟನೆ ಸಂಬಂಧ ಆರೋಪಿ ಮುದ್ದಕ್ಕಳ ವಿರುದ್ಧ ಚಳ್ಳಕೆರೆ ಠಾಣೆಗೆ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾವಿನಲ್ಲೂ ಒಂದಾದ ತಾಯಿ – ಮಗ

ನಾಪತ್ತೆಯಾಗಿದ್ದ ಬಸ್ ಮಾಲಕ ಶವವಾಗಿ ಪತ್ತೆ

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸರ್ಕಾರದ ಸಾಧನೆ: ಈಶ್ವರ ಖಂಡ್ರೆ

ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನ

ಮಗುವನ್ನು ಕೊಂದು ಕಪಾಟುವಿನಲ್ಲಿಟ್ಟಿದ್ದ ಕಿರಾತಕಿಯ ಬಂಧನ

 

ಇತ್ತೀಚಿನ ಸುದ್ದಿ

Exit mobile version