ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ: ಸೊಸೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅತ್ತೆ ನೇಣಿಗೆ ಶರಣು
ಮೈಸೂರು: ಅತ್ತೆ, ಸೊಸೆ ಜಗಳದಲ್ಲಿ ಅತ್ತೆ ಚಾಕುವಿನಿಂದ ಸೊಸೆಗೆ ಚುಚ್ಚಿದ್ದು, ಬಳಿಕ ತಾನು ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ. ಅತ್ತೆ ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿ ಎಂದು ತಿಳಿದು ಬಂದಿದೆ.
ಅತ್ತೆ ಸೊಸೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಈ ಜಗಳ ಚಾಕು ಹಿಡಿದುಕೊಂಡು ಕಿತ್ತಾಡುವ ಮಟ್ಟಕ್ಕೆ ಬೆಳೆದಿತ್ತು. ಈ ವೇಳೆ ಕೋಪಗೊಂಡ ಅತ್ತೆ ಸೊಸೆಗೆ ಚಾಕುವಿನಿಂದ ಚುಚ್ಚಿಯೇ ಬಿಟ್ಟಿದ್ದಾರೆ. ಅತ್ತೆ ಚಾಕುವಿನಿಂದ ಚುಚ್ಚಿದ ವೇಳೆ ಸೊಸೆ ಜೋರಾಗಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಹಾಗೂ ಮಹಿಳೆಯ ಪತಿ ಎಲ್ಲರೂ ಆಗಮಿಸಿ ಸೊಸೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇತ್ತ ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ ಮನೆಯಲ್ಲಿ ಒಬ್ಬರೇ ಇದ್ದು, ಸೊಸೆಗೆ ಏನಾಗಿದೆ ಎನ್ನುವುದು ತಿಳಿಯದೇ, ಪೊಲೀಸರ ಹೆದರಿಕೆಯಿಂದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
62 ವರ್ಷ ವಯಸ್ಸಿನ ಬೋಗಾದಿ ನಿವಾಸಿ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಮಾದೇವಿ ನೇಣಿಗೆ ಶರಣಾದವರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಸೊಸೆಯ ನಡುವೆ ಮಾತಿಗೆ ಮಾತು ಬೆಳೆದು ಇದೀಗ ದುರಂತವೇ ಸಂಭವಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ
ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ | ಐವರು ಅರೆಸ್ಟ್
ಅರ್ಚಕನ ಮಾದಕ ಜಾಲ ಬಯಲು: ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕ ಅರೆಸ್ಟ್
ಉದ್ಯೋಗ ನೀಡುವ ಬದಲು, ಬಿಜೆಪಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ | ಕುಮಾರಸ್ವಾಮಿ
ತಮ್ಮ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಿದ ಪಂಜಾಬ್ ನ ಮಾಜಿ ಸಿಎಂ ಅಮರೀಂದರ್ ಸಿಂಗ್!
ನೆಹರೂ ಒಪ್ಪಿದ್ದ ಆರೆಸ್ಸೆಸ್ ನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿ | ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ
ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಜೀವಂತವಾಗಿ ಪತ್ತೆ!