ವೈಮನಸ್ಸು: ಸೊಸೆಯನ್ನು ತಬ್ಬಿಕೊಂಡು ಆಕೆಗೂ ಕೊರೊನಾ ಬರಿಸಿದ ಅತ್ತೆ
ಹೈದರಾಬಾದ್: ಕೊವಿಡ್ 19 ಪಾಸಿಟಿವ್ ಕಾಣಿಸಿಕೊಂಡು ಐಸೋಲೇಷನ್ ನಲ್ಲಿದ್ದ ಅತ್ತೆ, ತಾನು ಸಾಯುವಂತಹ ಸ್ಥಿತಿಯಲ್ಲಿರುವಾಗ ಮನೆಯಲ್ಲಿ ಸೊಸೆ ಹಾಗೂ ಎಲ್ಲರೂ ಸಂತೋಷವಾಗಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ಸೊಸೆಯನ್ನು ಅಪ್ಪಿಕೊಂಡು, ಆಕೆಗೂ ಕೊವಿಡ್ 19 ಬರಿಸಿದ ಆತಂಕಕಾರಿ ಘಟನೆ ನಡೆದಿದೆ.
ತೆಲಂಗಾಣದ ಸೋಮಾರಿಪೇಟೆ ಗ್ರಾಮದಲ್ಲಿ ವಾಸಿಸುತ್ತಿದ್ದ ಅತ್ತೆ ಸೊಸೆಯ ರಿಯಲ್ ಸ್ಟೋರಿ ಇದಾಗಿದೆ. ಅತ್ತೆಗೆ ಕೊವಿಡ್ 19 ಪಾಸಿಟಿವ್ ಬಂದ ಬಳಿಕ ಅವರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಮತ್ತು ಅವರಿಗೆ ಆಹಾರವನ್ನು ಕೋವಿಡ್ ಮಾರ್ಗಸೂಚಿಯಂತೆಯೇ ಪ್ರತ್ಯೇಕವಾಗಿ ಗೊತ್ತುಪಡಿಸಿದ ಸ್ಥಳದಲ್ಲಿಡಲಾಗುತ್ತಿತ್ತು.
ಮೊಮ್ಮಕ್ಕಳನ್ನು ಅತ್ತೆ ಬಹಳಷ್ಟು ಹಚ್ಚಿಕೊಂಡಿದ್ದರು. ಆದರೆ ಅವರನ್ನು ಮೊಮ್ಮಕ್ಕಳ ಬಳಿಗೆ ಹೋಗಲು ಅನುಮತಿ ನೀಡಲಾಗಿರಲಿಲ್ಲ. ಒಬ್ಬಂಟಿಯಾಗಿರುವುದರಿಂದ ಬೇಸತ್ತ ಅತ್ತೆ, ಸೊಸೆಯನ್ನು ಅಪ್ಪಿಕೊಂಡಿದ್ದು, “ನಾನು ಸಾಯುವಾಗ ನೀವೆಲ್ಲ ಸಂತೋಷದಿಂದ ಬದುಕಲು ನೋಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇದೀಗ ಸೊಸೆಗೆ ಕೂಡ ಕೊವಿಡ್ 19 ಪಾಸಿಟಿವ್ ಬಂದಿದ್ದು, ಇದೀಗ ಸೊಸೆ ತನ್ನ ಸಹೋದರಿಯ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದಾಳೆ ಎಂದು ಆಕೆಯ ಸಹೋದರಿ ತಿಳಿಸಿದ್ದಾರೆ.