100 ದಿನ ಪೂರೈಸಿದ ‘ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಚಿತ್ರ

sounds and lights
07/09/2022

ಒಂದು ಮೊಟ್ಟೆ ಕಥೆ ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಬ್ಯಾನರ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಚಿತ್ರ 100 ದಿನಗಳ ಪ್ರದರ್ಶನ ಕಂಡಿದೆ.

ಇದರ ಶತದಿನದ ಸಂಭ್ರಮಾಚರಣೆ ಕಾರ್ಯಕ್ರಮವು ಸೆಪ್ಟೆಂಬರ್ 8ರಂದು ಸಂಜೆ 5 ಗಂಟೆಗೆ ಮಂಗಳೂರು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಚಿತ್ರದ ನಾಯಕ ನಟ ವಿನೀತ್ ಕುಮಾರ್ ಮತ್ತು ನಿರ್ದೇಶಕ ರಾಹುಲ್ ಅಮೀನ್ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, 50 ದಿನಗಳ ಪ್ರದರ್ಶನ ಸಂದರ್ಭದಲ್ಲಿ ಪ್ರದರ್ಶನದಿಂದ ಬಂದ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮೂವರು ಕಲಾವಿದರಿಗೆ ನೀಡಲಾಗಿದೆ. 100 ದಿನಗಳ ಪ್ರದರ್ಶನವನ್ನು ಮಂಗಳೂರಿನ ಭಾರತ್ ಮಾಲ್’ನ ಬಿಗ್ ಸಿನಿಮಾಸ್’ನಲ್ಲಿ ಉಚಿತ ಪ್ರದರ್ಶನ ನೀಡುವ ಮೂಲಕ ಆಚರಿಸಲಾಯಿತು.

ತುಳು ಭಾಷೆ ಬೆಳೆಯಬೇಕು. ತುಳು ಭಾಷೆ ಉಳಿಯಬೇಕು. ತುಳು ಭಾಷೆಗೆ ಪ್ರಾಧಾನ್ಯತೆ ದೊರೆಯ ಬೇಕು ಎನ್ನುವುದು ಚಿತ್ರ ತಂಡದ ಆಶಯವಾಗಿದೆ ಎಂದು ನಟ ವಿನೀತ್ ಕುಮಾರ್ ತಿಳಿಸಿದರು. ನಿತಿನ್ ರಾಜ್ ಶೆಟ್ಟಿ ಪವನ್ ಕುಮಾರ್, ನಿತಿನ್ ಶೇರಿಗಾರ್ ಉಪಸ್ಥಿತರಿದ್ದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version