ಒಮಿಕ್ರಾನ್ ಡೆಲ್ಟಾಕ್ಕಿಂತ ಅಪಾಯಕಾರಿ ಅಲ್ಲ: ಈ ವೈರಸ್ ನ್ನು ಕಂಡು ಹಿಡಿದ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದೇನು? - Mahanayaka
4:51 PM Saturday 14 - December 2024

ಒಮಿಕ್ರಾನ್ ಡೆಲ್ಟಾಕ್ಕಿಂತ ಅಪಾಯಕಾರಿ ಅಲ್ಲ: ಈ ವೈರಸ್ ನ್ನು ಕಂಡು ಹಿಡಿದ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದೇನು?

omicron
03/12/2021

ಕೊವಿಡ್ 19 ರೂಪಾಂತರ ವೈರಸ್ ಒಮಿಕ್ರಾನ್ ಬಗ್ಗೆ ಇದೀಗ ಜನರಲ್ಲಿ ಆತಂಕ ಹೆಚ್ಚಿದೆ. ಕರ್ನಾಟಕದಲ್ಲಿ ಇಬ್ಬರಿಗೆ ಒಮಿಕ್ರಾನ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ನಿನ್ನೆ ಜನರು ತೀವ್ರವಾಗಿ ಆತಂಕಗೊಂಡಿದ್ದರು. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಒಮಿಕ್ರಾನ್ ಅಷ್ಟೊಂದು ಅಪಾಯಕಾರಿ ವೈರಸ್ ಅಲ್ಲ ಎಂದು ಹೇಳಿರುವುದು ಕೂಡ ಚರ್ಚೆಯಾಗಿತ್ತು. ಹಾಗಿದ್ದರೆ, ಈ ಒಮಿಕ್ರಾನ್ ಏನು? ಇದನ್ನು ಮೊದಲು ಕಂಡು ಹಿಡಿದವರು ಇದರ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ಇಂದು ಸಾರ್ವಜನಿಕರು ತಿಳಿದುಕೊಳ್ಳಲೇ ಬೇಕಿದೆ.

ಜಗತ್ತಿಗೆ ಮೊದಲ ಬಾರಿ ಕೊವಿಡ್ 19ನ ಒಮಿಕ್ರಾನ್ ವೈರಸ್ ಬಗ್ಗೆ ತಿಳಿಸಿದ್ದು ದಕ್ಷಿಣ ಆಫ್ರಿಕಾದ ಡಾಕ್ಟರ್ ಆ್ಯಂಜಲಿಕ್. ನನ್ನ ರೋಗಿ ಒಮಿಕ್ರಾನ್ ನಿಂದ ಸೋಂಕಿನಿಂದ ಬಳಲುತ್ತಿದ್ದ. ಇದರ ಬಗ್ಗೆ ನಾನು ಮಾಹಿತಿ ನೀಡಿದಾಗ ಇಡೀ ಪ್ರಪಂಚದಲ್ಲಿಯೇ ನನಗೆ ಮಹತ್ವವನ್ನು ನೀಡಲಾಯಿತು. ಆದರೆ, ಒಮಿಕ್ರಾನ್ ಡೆಲ್ಟಾಗಿಂತ ಅಪಾಯಕಾರಿಯಲ್ಲ. ಇದೊಂದು ಮೈಲ್ಡ್ ಸಿಂಪ್ಟಮ್ಸ್ ಆಗಿದ್ದು, ಈ ವೈರಸ್ ನಿಂದ ಡೆತ್ ರೇಟ್ ಕೂಡ ಹೆಚ್ಚಿಲ್ಲ. ಜೊತೆಗೆ ಒಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕೂಡ ಕಡಿಮೆ ಎಂದು ಅವರು ಹೇಳಿದ್ದಾರೆ.

ಡಾಕ್ಟರ್ ಆ್ಯಂಜಲಿಕ್ ಹೇಳಿರುವ ಇನ್ನೊಂದು ಅಚ್ಚರಿಯ ವಿಚಾರವೇನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ಒಮಿಕ್ರಾನ್ ನಿಂದ ಬಳಲಿ ಯಾರು ಕೂಡ ಆಸ್ಪತ್ರೆಗೆ ದಾಖಲಾಗಿಲ್ಲವಂತೆ. ಡಾಕ್ಟರ್ ಆ್ಯಂಜಲಿಕ್ ಅವರು ಹೇಳುವಂತೆ, ಯುರೋಪ್ ರಾಷ್ಟ್ರಗಳು ಒಮಿಕ್ರಾನ್ ಬಗ್ಗೆ ಸುಖಾಸುಮ್ಮನೆ ಪ್ರಚಾರ ನೀಡಿ, ವಿಮಾನ ಸಂಚಾರ ರದ್ದು, ಮಾಸ್ಕ್ ಧರಸೋದನ್ನು ಕಡ್ಡಾಯ ಮಾಡಿವೆ ಎಂದು ಅವರು ಹೇಳಿದ್ದಾರೆ.

ನಮಗೆ ಸಿಕ್ಕಿರುವ ಸಾಕ್ಷಿಗಳ ಪ್ರಕಾರ, ಒಮಿಕ್ರಾನ್ ಒಂದು ವೇಗವಾಗಿ ಹರಡುವ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿರುವ ವೈರಸ್ ಆಗಿದೆ. ಇದು ಹರ್ಡ್ ಇಮ್ಯುನಿಟಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮುಂದಿನ ವಾರದಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ಸಿಗಲಿದೆ. ಮೊದಲು ಸೋಂಕಿಗೊಳಗಾಗಿದ್ದ ಯುವಕ ತನ್ನ ಬಳಿಗೆ ಬರುವಾಗ ಬಿಸಿಲಿನಲ್ಲಿ ಕೆಲಸ ಮಾಡಿದ್ದರಿಂದಾಗಿ ನನ್ನ ಆರೋಗ್ಯ ಹಾಳಾಗಿದೆ ಎಂದು ನನಗೆ ಹೇಳಿದ್ದ. ಆದರೆ, ಪರೀಕ್ಷೆ ನಡೆಸಿದಾಗ ಆತ ಒಮಿಕ್ರಾನ್ ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು ಎಂದು ಆ್ಯಂಜಲಿಕ್ ಹೇಳಿದರು.

ಇನ್ನೂ ತನ್ನ ಹೇಳಿಕೆಯನ್ನು ಬ್ರಿಟನ್ ಇಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದು ನನ್ನನ್ನು ದಿಗ್ಭ್ರಮೆಗೊಳಿಸಿದೆ. ಆದರೆ, ಒಮಿಕ್ರಾನ್ ಡೆಲ್ಟಾಗಿಂತ ಅಪಾಯಕಾರಿ ಎಂದು ಪರಿಗಣಿಸುವುದು ಬೇಡ ಎಂದು ಸ್ವತಃ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ಪತ್ತೆ

ಪುತ್ರನ ಮದುವೆಯ ಸಂಭ್ರಮದಲ್ಲಿದ್ದ ದಂಪತಿ ರಸ್ತೆ ಅಪಘಾತದಲ್ಲಿ ದಾರುಣ ಸಾವು!

ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ವೋಡಾಫೋನ್ – ಐಡಿಯಾ ವಿರುದ್ಧ ಕೇಸ್ ದಾಖಲಿಸಿದ ಜಿಯೋ!

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ

ಭೀಕರ ಅಪಘಾತ: ಇಬ್ಬರು ಬಜರಂಗದಳದ ಮುಖಂಡರ ದಾರುಣ ಸಾವು

ಇತ್ತೀಚಿನ ಸುದ್ದಿ