ಇಮೇಲ್ ಮೂಲಕ ಬಾಂಬ್ ಬೆದರಿಕೆ: ದಕ್ಷಿಣ ದೆಹಲಿಯ ಶಾಲಾ ವಿದ್ಯಾರ್ಥಿಗಳ ಸ್ಥಳಾಂತರ
ದೆಹಲಿಯ ಸಮ್ಮರ್ ಫೀಲ್ಡ್ಸ್ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ನಂತರ ಅಲ್ಲಿನ ಅಧಿಕಾರಿಗಳನ್ನು ಶುಕ್ರವಾರ ಸ್ಥಳಾಂತರಿಸಿದ್ದಾರೆ.
ವಿವರಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ 12.30 ಕ್ಕೆ ಇಮೇಲ್ ಸ್ವೀಕರಿಸಲಾಗಿದೆ. ಆದರೆ, ಇಂದು ಬೆಳಿಗ್ಗೆ ಶಾಲೆ ತೆರೆದ ನಂತರವೇ ಅಧಿಕಾರಿಗಳು ಇಮೇಲ್ ಅನ್ನು ಗಮನಿಸಿದ್ದಾರೆ.
ಅಂದಹಾಗೇ ಈ ಶಾಲೆಯು ದಕ್ಷಿಣ ದೆಹಲಿಯ ಐಷಾರಾಮಿ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಆದೇಶಿಸಲಾಯಿತು.
ಇನ್ನು ಈ ಪ್ರಕರಣದ ತನಿಖೆ ಮುಂದುವರೆದಂತೆ, ಇದು ಹುಸಿ ಕರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇಮೇಲ್ ಬಗ್ಗೆ ಪ್ರತಿಕ್ರಿಯಿಸಿದ ಶಾಲೆಯ ಪ್ರಾಂಶುಪಾಲೆ ಶಾಲಿನಿ ಅಗರ್ ವಾಲ್, ಅಧಿಕಾರಿಗಳು ಇಮೇಲ್ ನೋಡಿದ 10 ನಿಮಿಷಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಶಾಲೆಯ ಆವರಣವನ್ನು ಬಾಂಬ್ ಸ್ಕ್ವಾಡ್ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth