ಕಾಫಿ ಶಾಪ್ ನಲ್ಲಿ ಮೂಡಿದ ಪ್ರೀತಿ: ಉತ್ತರಪ್ರದೇಶದ ಯುವಕನ ಜತೆ ಕೊರಿಯಾ ಯುವತಿ ಮದುವೆ - Mahanayaka
1:03 PM Sunday 22 - September 2024

ಕಾಫಿ ಶಾಪ್ ನಲ್ಲಿ ಮೂಡಿದ ಪ್ರೀತಿ: ಉತ್ತರಪ್ರದೇಶದ ಯುವಕನ ಜತೆ ಕೊರಿಯಾ ಯುವತಿ ಮದುವೆ

21/08/2023

ಇತ್ತೀಚೆಗೆ ಗಡಿ ದಾಟಿದ ಪ್ರೇಮ ಪ್ರಕರಣಗಳು ಹೆಚ್ಚಾಗಿ ಸುದ್ದಿಯಾಗುತ್ತಿದೆ. ದಕ್ಷಿಣ ಕೊರಿಯಾದ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗುವುದಕ್ಕೆ ಭಾರತಕ್ಕೆ ಬಂದಿದ್ದಾಳೆ.

ದಕ್ಷಿಣ ಕೊರಿಯಾದ ಕಿಮ್​ ಬೊಹ್​ ನಿ ಎಂಬಾಕೆ ತನ್ನ ಪ್ರಿಯಕರ ಭಾರತದ ಸುಖ್​ಜೀತ್ ಸಿಂಗ್​ ಎಂಬಾತನನ್ನು 2 ವರ್ಷದ ಹಿಂದೆ ಸೌತ್ ಕೊರಿಯಾದ ಕಾಫಿ ಶಾಪ್​ನಲ್ಲಿ ಭೇಟಿಯಾಗಿದ್ದಾರೆ. ಬಳಿಕ ಒಬ್ಬರಿಗೊಬ್ಬರು ಪರಿಚಯ ಆಗಿದ್ದಾರೆ. ಪರಿಚಯ ಪ್ರೀತಿಯಾಗಿ ಬದಲಾಗಿದ್ದು ಈಗ ಇಬ್ಬರು ದಂಪತಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆರು ತಿಂಗಳ ಮಟ್ಟಿಗೆ ಸುಖ್‌ಜೀತ್ ಭಾರತಕ್ಕೆ ಮರಳಿದ್ದ. ಆದರೆ ಈ ಅವಧಿಯಲ್ಲಿ ಆತನನ್ನು ಬಿಟ್ಟಿರಲಾಗದೇ ಚಡಪಡಿಸಿದ್ದ ಕೊರಿಯನ್ ಯುವತಿ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದಿದ್ದಾಳೆ. ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ಶಹಜಹಾನ್ ಪುರ ಜಿಲ್ಲೆಯ ಪುವಾಯಾನ್ ನಲ್ಲಿರುವ ಗುರುದ್ವಾರ ನಾನಕ್ ಬಾಗ್ ನಲ್ಲಿ ಈ ಜೋಡಿ ಸಿಖ್​ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.


Provided by

3 ತಿಂಗಳ ಟೂರಿಸ್ಟ್​ ವೀಸಾದಲ್ಲಿ ಕಿಮ್ಸ್​ ಭಾರತಕ್ಕೆ ಬಂದಿದ್ದು, ಇನ್ನು ಒಂದು ತಿಂಗಳ ಮಟ್ಟಿಗೆ ಇಲ್ಲಿರಲಿದ್ದಾಳೆ. ಆ ಬಳಿಕ ಆಕೆ ದಕ್ಷಿಣ ಕೊರಿಯಾಗೆ ವಾಪಸ್ ತೆರಳಲಿದ್ದಾಳೆ. ಅದಾಗಿ ಮೂರು ತಿಂಗಳ ಬಳಿಕ ಸುಖ್​ಜೀತ್ ಕೂಡ ಸೌತ್ ಕೊರಿಯಾಗೆ ಹೋಗಲಿದ್ದಾನೆ. ಮುಂದೆ ಆಕೆಯೊಂದಿಗೆ ದಕ್ಷಿಣ ಕೊರಿಯಾದಲ್ಲಿ ನೆಲೆಸುವುದಾಗಿ ಆತ ಹೇಳಿಕೊಂಡಿದ್ದಾನೆ.

ಇತ್ತೀಚಿನ ಸುದ್ದಿ