ರೌಡಿಶೀಟರ್ಸ್ ಜೊತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ: ಚುನಾವಣೆ ಗೆಲ್ಲಲು ರೌಡಿಗಳ ಮೊರೆ ಹೋದ್ರಾ ಸ್ಪೀಕರ್!?
ಬೆಂಗಳೂರು: ರೌಡಿಶೀಟರ್ಸ್ ಜೊತೆ ಸ್ಪೀಕರ್ ಕಾಗೇರಿ ಸಭೆ ಫೋಟೋ ವೈರಲ್ ಆಗುತ್ತಿದ್ದು,ವಿಪಕ್ಷ ಸೇರಿದಂತೆ ಹಲವರಿಂದ ಟೀಕೆಗೊಳಗಾಗುತ್ತಿದ್ದು,ಬಿಜೆಪಿಗೆ ಒಂದುರೀತಿಯ ಮುಜುಗರವಾಗುತ್ತಿದೆ.
ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರೌಡಿ ಶೀಟರ್ ಫಯಾಜ್ ಚೌಟಿ ಮತ್ತು ಆತನ ಬೆಂಬಲಿಗರೊಂದಿಗೆ ಗುಪ್ತ ಸಭೆ ನಡೆಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಡುತ್ತಿದ್ದಂತೆ ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ. ರೌಡಿ ಶೀಟರ್ ಫೈಟರ್ ರವಿಗೆ ಮೋದಿ ಕೈಮುಗಿಯುತ್ತಾರೆ, ರೌಡಿ ಫಯಾಜ್ನೊಂದಿಗೆ ಕಾಗೇರಿ ಗುಪ್ತ ಸಭೆ ನಡೆಸುತ್ತಾರೆ. ರೌಡಿಗಳನ್ನು ಬಿಜೆಪಿಯ ಸೋಕಾಲ್ಡ್ ಸಜ್ಜನರು ಅಪ್ಪಿ ಮುದ್ದಾಡುತ್ತಿರುವುದೇಕೆ? #BJPRowdyMorcha ಕ್ಕೆ ಸೇರಿಸಿಕೊಳ್ಳಲು ನಡೆಸಿದ ಓಲೈಕೆ ಸಭೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಫಯಾಜ್ ಚೌಟಿ ಅಪಹರಣ, ಹಣ ವಂಚನೆ ಮತ್ತು ದರೋಡೆ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣ ಎದುರಿಸುತ್ತಿದ್ದಾನೆ. ಆತನನ್ನು ಪಕ್ಕದಲ್ಲೇ ಕುಳಿಸಿಕೊಂಡು ಕಾಗೇರಿಯವರು ಆತನ ಬೆಂಬಲಿಗರೊಂದಿಗೆ ತಮ್ಮ ಕಚೇರಿಯಲ್ಲಿ 5 ದಿನಗಳ ಹಿಂದೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಚುನಾವಣಾ ಸಮಯದಲ್ಲಿ ರೌಡಿಗಳೊಂದಿಗೆ ಸಭೆ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.ಮಂಡ್ಯದ ನಾಗಮಂಗಲದಲ್ಲಿ ರೌಡಿ ಶೀಟರ್ ಆಗಿದ್ದ ಫೈಟರ್ ರವಿ ಬಿಜೆಪಿ ಸೇರಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೈ ಮುಗಿಯುತ್ತಿರುವ ಫೋಟೊ ವೈರಲ್ ಆಗಿತ್ತು. ಇನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನೀಲ್ ಬಿಜೆಪಿ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಹಾಗಾಗಿ ಬಿಜೆಪಿ ರೌಡಿ ಮೋರ್ಚಾ ಎಂದು ಪ್ರತಿಪಕ್ಷಗಳು ಲೇವಡಿ ಮಾಡುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EOUjVqy3Mmp66N4bRSBoht
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw