ಮತದಾರರ ಗಮನ ಸೆಳೆದ ವಿಶೇಷ ‘ಸಖಿ’ ಮತಗಟ್ಟೆ ಕೇಂದ್ರ!
26/04/2024
ತುಮಕೂರು: ಗಾಂಧಿನಗರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ತೆರೆಯಲಾಗಿರುವ ವಿಶೇಷವಾದ ಸಖಿ ಮತಗಟ್ಟೆ ಕೇಂದ್ರವು ಮತದಾರರನ್ನು ಆಕರ್ಷಿಸಿತು.
ಮತಗಟ್ಟೆಯ ಹೊರಭಾಗ ಮಹಿಳೆಯರ ಚಿತ್ರಗಳನ್ನು ಚಿತ್ರಿಸಲಾಗಿದ್ದು, ಮತದಾನಕ್ಕೆ ಪ್ರೇರೇಪಿಸಲಾಗುತ್ತಿದೆ. ಅಲ್ಲದೆ ವಿಶೇಷವಾಗಿ ಈ ಮತಗಟ್ಟೆ ಕೇಂದ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕೂಡ ಗಮನಾರ್ಹ ಅಂಶವಾಗಿದೆ.
ಮತಗಟ್ಟೆ ಮುಂಭಾಗ ಬಲೂನ್ ಗಳನ್ನು ಕಟ್ಟಿ ವಿಭಿನ್ನವಾಗಿ ಅಲಂಕರಿಸಲಾಗಿದೆ. ಮತಗಟ್ಟೆ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳು ಕೂಡ ಮಹಿಳೆಯರೇ ಆಗಿರುವುದು ವಿಶೇಷವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth