ಸ್ಫೋಟಗೊಂಡ ರಷ್ಯಾದ ನೌಕೆ :ಉಪಗ್ರಹ ಚಿತ್ರ ಬಿಡುಗಡೆ
ರಷ್ಯಾ ವಶಪಡಿಸಿಕೊಂಡ ಉಕ್ರೇನಿನ ಬಂದರಿನಲ್ಲಿ ಲಂಗರು ಹಾಕಿದ್ದ ರಷ್ಯಾದ ನೌಕಾಪಡೆಯ ಹಡಗೊಂದು ಉಕ್ರೇನ್ ಸೈನ್ಯ ಸ್ಫೋಟ ಮಾಡುವ ಉಪಗ್ರಹ ಚಿತ್ರ ಈಗ ಲಭ್ಯವಾಗಿದೆ.
ಪ್ರಾಜೆಕ್ಟ್ 1171 ಅಲಿಗೇಟರ್ ಕ್ಲಾಸ್ ಲ್ಯಾಂಡಿಂಗ್ ಹಡಗು ಓರ್ಸ್ಕ್ ಎಂಬ ರಷ್ಯಾದ ನೌಕೆಗೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಲಭ್ಯವಿರುವ ವರದಿಗಳ ಪ್ರಕಾರ, ಉಕ್ರೇನಿಯನ್ ಸೇನೆಯು ಟೋಚ್ಕಾ-ಯು ಶಾರ್ಟ್ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಪಯೋಗಿಸಿ ರಷ್ಯಾದ ಈ ನೌಕೆಯನ್ನು ಸ್ಫೋಟ ಮಾಡಿರುವ ಉಪಗ್ರಹ ಚಿತ್ರ ಬಿಡುಗಡೆ ಆಗಿದೆ
ಟೋಚ್ಕಾ-ಯು ಶಾರ್ಟ್- ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಉಕ್ರೇನಿಯನ್ ಮಿಲಿಟರಿ, ಹಡಗು ಮತ್ತು ಸುತ್ತಮುತ್ತಲಿನ ಮೂಲಸೌಕರ್ಯವನ್ನು ಹಾನಿಗೊಳಿಸಿದೆಯೇ ಎಂಬುದು ಚಿತ್ರಗಳಲ್ಲಿ ಸ್ಪಷ್ಟವಾಗಿಲ್ಲ. ಆದರೆ ಟೋಚ್ಕಾ-ಯು ಕ್ಷಿಪಣಿ ಆಗಿದ್ದರೆ ಹಡಗು ಸಂಪೂರ್ಣವಾಗಿ ನಾಶವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಗಳನ್ನು ವಾಣಿಜ್ಯ ಉಪಗ್ರಹ ಚಿತ್ರಣ ಪೂರೈಕೆದಾರರಾದ ಮ್ಯಾಕ್ಸಿಸ್ ಟೆಕ್ನಾಲಜೀಸ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಫ್ರೀ ಓಪನ್ ಸೋರ್ಸ್ ಇಂಟೆಲಿಜೆನ್ಸ್ ವಿಶ್ಲೇಷಕ ಡಿಟ್ರೆಸ್ಫಾ (@detresfa)ಕೂಡ ಇದನ್ನು ಟ್ವೀಟ್ ಮಾಡಿದ್ದಾರೆ. ಬರ್ಡಿಯಾನ್ಸ್ಕ್ ಬಂದರಿನಲ್ಲಿ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಹಡಗು ಕಳೆದ ವಾರ ಬರ್ಡಿಯನ್ಸ್‌ಗೆ ಬಂದಿತ್ತು BTR-82A ಚಕ್ರದ ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಸರಕುಗಳನ್ನು ಇಲ್ಲಿ ಇಳಿಸಲಾಯಿತು. ಆಗ್ನೇಯ ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾ ಈ ಬಂದರನ್ನು ಬಳಸಲಾಗುತ್ತಿದೆ ಎಂಬ ಮಾಹಿತಿಯು ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರಪಾತಕ್ಕೆ ಉರುಳಿದ ಬಸ್: 7 ಮಂದಿ ಸಾವು, 45 ಮಂದಿಗೆ ಗಾಯ
ಕಾಡಾನೆ ದಾಳಿ: ಮಹಿಳೆ ಸಾವು; ಓರ್ವ ಗಂಭೀರ
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಗೆ ಒಂದು ವರ್ಷ ಜೈಲು
ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಸಚಿವ ಬಿ.ಸಿ.ನಾಗೇಶ್
ದಿ ಕಾಶ್ಮೀರ್ ಫೈಲ್ ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು