ಶ್ರೀ ಕಲಾನಾಥೇಶ್ವರ ದೇವಸ್ಥಾನಕ್ಕೆ ಶ್ರೀ ಬ್ರಹ್ಮರಥ ಆಗಮಿಸಲಿದೆ

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಶ್ರೀ ಕಲಾನಾಥೇಶ್ವರ ದೇವಾಲಯಕ್ಕೆ ಅರ್ಪಣೆಗೊಳ್ಳಲಿರುವ ಶ್ರೀ ಬ್ರಹ್ಮರಥವು ಇಂದು (ಮಂಗಳವಾರ) ಮುಂಜಾನೆ ಉಡುಪಿ ಜಿಲ್ಲೆ ಕೋಟೇಶ್ವರದ ಕುಂಬಾಸಿಯಿಂದ ಹೊರಟಿದೆ.
ಈ ರಥವು ಇಂದು ಸಂಜೆ 5 ಗಂಟೆಯ ವೇಳೆಗೆ ಕೊಟ್ಟಿಗೆಹಾರ ತಲುಪಲಿದ್ದು, ಅಲ್ಲಿಂದ ಫಲ್ಗುಣಿ ದೇವಾಲಯದವರೆಗೆ ಭಕ್ತಾದಿಗಳ ಮೆರವಣಿಗೆಯೊಂದಿಗೆ ಸಾಗಿಸಲುತ್ತದೆ.
ಶ್ರೀ ಬ್ರಹ್ಮರಥವನ್ನು ಸ್ವಾಗತಿಸಲು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನ ಸಮಿತಿಯವರು ಭಕ್ತಾಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಜೆ 5 ಗಂಟೆಗೆ ಕೊಟ್ಟಿಗೆಹಾರಕ್ಕೆ ಆಗಮಿಸಲು ಕೋರಿದ್ದಾರೆ.
ಸ್ಥಳೀಯರು, ಭಕ್ತರು, ಪರಂಪರೆಯ ಹಬ್ಬದಲ್ಲಿ ಭಾಗವಹಿಸಿ ಮಹಾ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಪ್ರಕಟಣೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7