ಆಂಧ್ರದ ಈ ಊರಿಗೆ ಮಹಾತ್ಮಗಾಂಧಿಯೇ ಗ್ರಾಮ ದೇವರು: ‘ಅಹಿಂಸಾ ಮಾರ್ಗ’ದ ಪಾಠ ಕಲಿಸುವ ಈ ಗ್ರಾಮದ ಹಬ್ಬ..!
ಇದು ಅಚ್ಚರಿಯಾದರೂ ಸತ್ಯ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸ ಮಂಡಲದ ಕೇದಾರಿಪುರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಗ್ರಾಮ ದೇವರಾಗಿ ಪೂಜಿಸಲಾಗುತ್ತದೆ. ಇಡೀ ಭಾರತ ದೇಶವೇ ಗೌರವಿಸುವ ಮಹಾತ್ಮ ಗಾಂಧಿಯವರು ಕೇದಾರಿಪುರಂ ಗ್ರಾಮಸ್ಥರಿಗೆ ದೇವರಿದ್ದಂತೆ.
ಹೌದು. ಪ್ರತಿ ವರ್ಷ ಆಷಾಢ ಮಾಸ ಮುಗಿಯುತ್ತಿದ್ದಂತೆ ಗುರುವಾರದಂದು ಗಾಂಧಿ ಉತ್ಸವ ನಡೆಯುತ್ತದೆ. ಬೆಳೆಗಳು ಚೆನ್ನಾಗಿ ಬೆಳೆಯಬೇಕೆಂದು ಬಯಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಬ್ಬದ ನಂತರವೇ ಖಾರಿಫ್ ಋತುವಿನ ಭತ್ತದ ಕೊಯ್ಲು ಆರಂಭವಾಗುತ್ತದೆ.
ಪ್ರಾಣಿಬಲಿ ಸಾಮಾನ್ಯವಾಗಿ ಗ್ರಾಮ ದೇವತೆಗಳ ಉತ್ಸವಗಳ ಕೇಂದ್ರಬಿಂದುವಾಗಿದೆ. ಆದರೆ ಈ ಹಬ್ಬದಲ್ಲಿ ಅಂಥದ್ದೇನೂ ಕಾಣುವುದಿಲ್ಲ. ಮಹಾತ್ಮ ಗಾಂಧೀಜಿಯವರು ಬೋಧಿಸಿದ ಅಹಿಂಸಾ ಮಾರ್ಗದಲ್ಲಿ ಈ ಹಬ್ಬವು ಮುಂದುವರಿಯುತ್ತದೆ. ಗಾಂಧಿ ಉತ್ಸವದ ದಿನದಂದು ಇಡೀ ಗ್ರಾಮದಲ್ಲಿ ಮಕ್ಕಳೊಂದಿಗೆ ಪಥ ಸಂಚಲನ ನಡೆಯುತ್ತದೆ.
ತಮಟೆ ವಾದ್ಯಗಳು ಮತ್ತು ನೃತ್ಯಗಳೊಂದಿಗೆ ಎಲ್ಲಾ ಗ್ರಾಮಸ್ಥರು ಮೆರವಣಿಗೆ ಗ್ರಾಮದ ಹೃದಯ ಭಾಗದಲ್ಲಿರುವ ಗಾಂಧಿ ಪ್ರತಿಮೆಯನ್ನು ತಲುಪುತ್ತಾರೆ. ಅಂದು ಇಡೀ ಗ್ರಾಮವೇ ಸಂಭ್ರಮದಿಂದ ಕೂಡಿರುತ್ತದೆ. ಗಾಂಧಿ ಪ್ರತಿಮೆಯ ಮುಂದೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಇರಿಸಲಾಗುತ್ತದೆ. ಅಲ್ಲಿ ಪೂಜೆ ಪುನಸ್ಕಾರ ಮಾಡಲಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw