ಉಮಾಶ್ರೀಯನ್ನು ಮಾಲಾಶ್ರೀ ಎಂದು ಕರೆದು ತಲೆ ಕೆರೆದುಕೊಂಡ ಶ್ರೀರಾಮುಲು!: ನಕ್ಕು ಸುಸ್ತಾದ ಪ್ರತಿಭಟನಾಕಾರರು! - Mahanayaka

ಉಮಾಶ್ರೀಯನ್ನು ಮಾಲಾಶ್ರೀ ಎಂದು ಕರೆದು ತಲೆ ಕೆರೆದುಕೊಂಡ ಶ್ರೀರಾಮುಲು!: ನಕ್ಕು ಸುಸ್ತಾದ ಪ್ರತಿಭಟನಾಕಾರರು!

sriramulu
20/12/2022

ಬೆಳಗಾವಿ: ಮಾಜಿ ಸಚಿವ ಉಮಾಶ್ರೀ ಅವರನ್ನು ಶ್ರೀರಾಮುಲು ಅವರು ಮಾಲಾಶ್ರೀ ಎಂದು ಕರೆದು ತಲೆ ಕೆರೆದುಕೊಂಡು ನಕ್ಕ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದ್ದು, ಶ್ರೀರಾಮುಲು ಅವರು ಕೆಲ ಕಾಲ ಪ್ರತಿಭಟನಾಕಾರರನ್ನು ನಗೆಗಡಲಲ್ಲಿ ತೇಲಾಡಿಸಿದ್ರು.


Provided by

ನೇಕಾರರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ನೇಕಾರರು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ಮಾಜಿ ಸಚಿವೆ ಉಮಾಶ್ರೀ ಅವರು ಸಾಥ್ ನೀಡಿದ್ದರು. ಪ್ರತಿಭಟನಾಕಾರರ ಮನವಿ ಆಲಿಸಲು ಆಗಮಿಸಿದ ಶ್ರೀರಾಮುಲು ಮಾತಿನ ವೇಳೆ ಯಡವಟ್ಟು ಮಾಡಿದ್ದಾರೆ.

ವಿವಿಧ ನಾಯಕರ ಹೆಸರು ಹೇಳಿದ ಬಳಿಕ, ಸಮುದಾಯದ ನಾಯಕರೂ, ಮಾಜಿ ಶಾಸಕರೂ ಆದ ಮಾಲಾಶ್ರೀಯವರೇ ಎಂದು ಹೇಳಿದ ಶ್ರೀರಾಮುಲು ತಕ್ಷಣವೇ ತಪ್ಪಿನ ಅರಿವಾಗಿ, ಉಮಾಶ್ರೀಯವರೇ ಎಂದು ಜೋರಾಗಿ ನಕ್ಕಿದ್ದಾರೆ. ಈ ವೇಳೆ ನೆರೆದ ಪ್ರತಿಭಟನಾಕಾರರು, ಅಧಿಕಾರಿ ವರ್ಗಗಳೆಲ್ಲರೂ ಜೋರಾಗಿ ನಕ್ಕಿದ್ದಾರೆ.


Provided by

ಈ ವೇಳೆ ಮತ್ತೆ ಮಾತ ಮುಂದುವರಿಸಿದ ಅವರು, ಇಲ್ಲ, ಬಹುಶಃ ನಾನು ಉಮಾಶ್ರೀ ಅಭಿಮಾನಿ ಅಲ್ಲ, ಮಾಲಾಶ್ರೀ ಅಭಿಮಾನಿ ಎಂದಿದ್ದಾರೆ. ಈ ವೇಳೆ, ನೀವು ಉಮಾಶ್ರೀ ಅಭಿಮಾನಿ ಅಲ್ವಾ ಅಂತ ಕೆಲವರು ಪ್ರಶ್ನಿಸಿದಾಗ, ನಾನು ಅಭಿಮಾನಿ ಎಂದ ಅವರು, ನಾವೆಲ್ಲರೂ ಉಮಾಶ್ರೀ ಅವರ ಅಭಿಮಾನಿಗಳು ಎಂದು ನಗುತ್ತಾ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ