SSCಯಿಂದ ಭರ್ಜರಿ 39,481 ಹುದ್ದೆಗಳ  ನೇಮಕಾತಿ: ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? - Mahanayaka
11:08 AM Thursday 12 - December 2024

SSCಯಿಂದ ಭರ್ಜರಿ 39,481 ಹುದ್ದೆಗಳ  ನೇಮಕಾತಿ: ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ssc gd constable recruitment 2024
08/09/2024

SSC GD Constable Recruitment 2024 — ಕೇಂದ್ರ ಸರ್ಕಾರ ಅಧೀನದ ಸಿಬ್ಬಂದಿ ನೇಮಕಾತಿ ಆಯ್ಕೆ ಆಯೋಗವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಸ್ ಎಸ್ ಸಿ ಜಿಡಿ ಕಾನ್ಸ್ಟೇಬಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ. ಭರ್ಜರಿ 39 ಸಾವಿರಕ್ಕಿಂತಲೂ ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ 3.5 ಸಾವಿರಕ್ಕಿಂತಲೂ ಹೆಚ್ಚು ಹುದ್ದೆಗಳನ್ನು ಮೀಸಲಿಡಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿ ಸಲ್ಲಿಕೆ ಯಾವ ದಿನದಂದು ಮುಕ್ತಾಯಗೊಳ್ಳಲಿದೆ? ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನವೇನು? ಎಂಬ ಮಾಹಿತಿ ಸೇರಿದಂತೆ ನೇಮಕಾತಿಯ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಹುದ್ದೆಗಳ ವಿವರ — ಯಾವ ಯಾವ ವಿಭಾಗದಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ?

ಈ ಒಂದು ನೇಮಕಾತಿಯಲ್ಲಿ ಒಟ್ಟು 39,481 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇವುಗಳಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾದ ಹುದ್ದೆಗಳ ವಿವರವು ಈ ಕೆಳಗಿನಂತಿದೆ.

* ಪುರುಷ ಅಭ್ಯರ್ಥಿಗಳಿಗೆ — 35,612 ಹುದ್ದೆಗಳು

* ಮಹಿಳಾ ಅಭ್ಯರ್ಥಿಗಳಿಗೆ — 3,869 ಹುದ್ದೆಗಳು

ನೇಮಕಾತಿ ಮಾಡಿಕೊಳ್ಳುತ್ತಿರುವ ವಿಭಾಗಗಳು :

* ಕೇಂದ್ರ ಸಶಸ್ತ್ರ ಪೊಲೀಸ್ ಪಡೆ — 7145 ಹುದ್ದೆಗಳು

* ಅಸ್ಸಾಂ ರೈಫೇಲ್ಸ್ — 1248 ಹುದ್ದೆಗಳು

* ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ — 3017 ಹುದ್ದೆಗಳು

* ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ — 22 ಹುದ್ದೆಗಳು

* ಕೇಂದ್ರ ಕೈಗಾರಿಕಾ ಭದ್ರತಾ ಪಡೆ — 11,541 ಹುದ್ದೆಗಳು

* ಸೆಕ್ರೆಟರಿಯಟ್ ಸೆಕ್ಯುರಿಟಿ ಫೋರ್ಸ್ — 35 ಹುದ್ದೆಗಳು

* ಸಶಸ್ತ್ರ ಸೀಮಾ ಬಲ — 819 ಹುದ್ದೆಗಳು

ಅರ್ಜಿ ಸಲ್ಲಿಸಲು ಅರ್ಹತೆಗಳು : ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ ಅರ್ಹತೆಗಳನ್ನು ನೋಡುವುದಾದರೆ ಕನಿಷ್ಠ 18 ರಿಂದ 23 ವರ್ಷದ ಒಳಗಿರಬೇಕು. ಮೀಸಲಾತಿ ವ್ಯಾಪ್ತಿಯ ವರ್ಗಗಳ ಅಡಿಯಲ್ಲಿ ಬರುವವರಿಗೆ ಗರಿಷ್ಠ ವಯೋಮಿತಿಯಲ್ಲಿ ವಯೋ ಸಡಿಲಿಕೆ ನೀಡಲಾಗುವುದು.

ಜಿ.ಡಿ.ಕಾನ್ಸ್ಟೇಬಲ್ ಆಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ : ₹21,700 ರೂ. ಯಿಂದ ₹69,100ರೂ. ವರೆಗೆ

SSC GD Constable Recruitment 2024 – ಅರ್ಜಿ ಶುಲ್ಕದ ಮಾಹಿತಿ :

ಸಾಮಾನ್ಯ ವರ್ಗದವರು ಹಾಗೂ ಹಿಂದುಳಿದ ವರ್ಗದವರು 100ರೂ. ಅರ್ಜಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು : ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಪ್ಟೆಂಬರ್ 5, 2024 ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಅಕ್ಟೋಬರ್ 14, 2024.

ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ – https://ssc.gov.in/login


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ