ಎಸೆಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ

ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 89.52 ಫಲಿತಾಂಶ ದಾಖಲಿಸಿದೆ. ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಅಲ್ಪ ಸುಧಾರಣೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27,170 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 24,322 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ (2021-22) 28,443 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 25,052 ಮಂದಿ ಉತ್ತೀರ್ಣರಾಗಿ ಶೇಕಡಾ 88.08 ಫಲಿತಾಂಶ ದಾಖಲಾಗಿತ್ತು.
ಈ ಬಾರಿ ಜಿಲ್ಲೆಯಲ್ಲಿ 125 ಶಾಲೆಗಳು ಶೇಕಡಾ 100 ಫಲಿತಾಂಶ ದಾಖಲಿಸಿದೆ. 35 ಸರಕಾರಿ, 8 ಅನುದಾನಿತ, 82 ಅನುದಾನರಹಿತ ಶಾಲೆಗಳು ಶೇ 100 ಸಾಧನೆ ಮಾಡಿವೆ. ಬಂಟ್ವಾಳ ವಲಯದ 20, ಬೆಳ್ತಂಗಡಿ 24, ಮಂಗಳೂರು ಉತ್ತರ 19, ಮಂಗಳೂರು ದಕ್ಷಿಣ 22, ಮೂಡಬಿದ್ರೆ 11, ಪುತ್ತೂರು 19 ಮತ್ತು ಸುಳ್ಯದ 10 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.
ಆಂಗ್ಲ ಮಾಧ್ಯಮದಲ್ಲಿ 7 ಮಂದಿ ಗರಿಷ್ಠ 623 ಅಂಕಗಳನ್ನು ಪಡೆದಿದ್ದಾರೆ. ಅವರೆಂದರೆ ಮಂಗಳೂರಿನ ಉರ್ವಾ ಕೆನರಾ ಹೈಸ್ಕೂಲ್‌ನ ಬಾಲಕ ಅವಿನಾಶ್ ಬಿ, ಕಿನ್ನಿಗೋಳಿ ಮೇರಿವೆಲೆ ಹೈಸ್ಕೂಲ್ ನ ಬಾಲಕ ಡೊವಿನಿಕ್ ರಾನ್ಸನ್ ಡಿ ಸೋಜ, ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕ ಪ್ರಣಾಮ್ ಎನ್. ಶೆಟ್ಟಿ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿ ಹಿಮಾನಿ ಎ.ಸಿ, ಕಾಣಿಯೂರು ಪ್ರಗತಿ ಪ್ರೌಢ ಶಾಲೆಯ ಬಾಲಕ ಉತ್ತಮ ಜಿ, ನರಿಮೊಗರು ಸಾಂದಿಪನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿ ತೇಜಸ್ ಎಸ್. ಆರ್ ಮತ್ತು ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿ ಮಹಾಥಿ ಬಿ ಅಗ್ರ ಸ್ಥಾನ ಗಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw