SSLC–PUC ನಕಲಿ ಅಂಕಪಟ್ಟಿ ಬೃಹತ್ ಜಾಲ ಪತ್ತೆ: ಮೂವರು ಅರೆಸ್ಟ್
ಬೆಂಗಳೂರಿನಲ್ಲಿ SSLC–PUC ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಬೇದಿಸಿದ್ದು, ಮೂರು ಮಂದಿಯನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ (36), ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್ ಲೇಜೌಟ್‍ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46), ಮತ್ತು ಅರಕೆರೆಯ ಡಾಕ್ಟರ್ಸ್ ಲೇಜೌಟ್ ನಿವಾಸಿ ಮೊಹಮದ್ ತೈಹಿದ್ ಅಹಮದ್ (30) ಬಂಧಿತ ಆರೋಪಿಗಳಾಗಿದ್ದಾರೆ.
ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂಬ ಸಂಸ್ಥೆ ತೆರೆದು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ.
ವೈಟಿಟಿ ಶಾಲೆಯ ಸಂಸ್ಥಾಪಕರಾದ ಮೈಲಾರಿ ಎಂಬುವವರು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಂಕಪಟ್ಟಿ ಜಾಲದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅಂಕ ಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ನಗರದ ವೈಟಿಟಿ ಇನ್ ಸ್ಟಿಟ್ಯೂಟ್ ಸಂಸ್ಥಾಪಕ, ಇಗ್ನೈಟ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ನ ಸಂಸ್ಥಾಪಕ ಹಾಗೂ ಕೆಐಒಎಸ್ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw