ಸೈದಾಪೂರ ಕೇಂದ್ರ ಮಟ್ಟದ ಕ್ರೀಡಾಕೂಟ: ಎಸ್ ಎಸ್ ಎನ್ ಪ್ರಾಥಮಿಕ ಶಾಲೆ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ
ಸಮೀರವಾಡಿ: ಸಮೀಪದ ಕೆಸರಗೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.06 ಮಂಗಳವಾರದಂದು ನಡೆದ ಸನ್ 2024 -25 ನೇ ಸಾಲಿನ ಸೈದಾಪೂರ ಕ್ಲಸ್ಟರನ ಕೇಂದ್ರ ಮಟ್ಟದ ಕ್ರೀಡಾಕೂಟದಲ್ಲಿ ಸೋಮೈಯಾ ಶಿಶುನಿಕೇತನ ಪ್ರಾಥಮಿಕ ಶಾಲೆಯ ಸೌಪರ್ಣಿಕಾ ಚನಾಳ ಹಾಗೂ ತಂಡದವರು ಕಬಡ್ಡಿ ಆಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ 100 ಮೀ ಓಟದಲ್ಲಿ ಮಹೇಶ ಮೋಪಗಾರ ತೃತೀಯ, 200 ಮೀ ಓಟದಲ್ಲಿ ಹಣಮಂತ ಮಾಂಗ ತೃತೀಯ, 400 ಮೀ ಓಟದಲ್ಲಿ ನಿರಂಜನ ಚವ್ವಾನ ಪ್ರಥಮ, ಬಾಲಕಿಯರ 100 ಮೀ ಓಟದಲ್ಲಿ ಚೈತ್ರಾ ಲಠ್ಠಿ ಪ್ರಥಮ, 200 ಮೀ ಓಟದಲ್ಲಿ ಅಪೂರ್ವ ಲಮಾಣಿ ದ್ವೀತಿಯ ಮತ್ತು ಅಶ್ವಿನಿ ಬನಹಟ್ಟಿ ತೃತೀಯ, 400 ಮೀ ಓಟದಲ್ಲಿ ಚೈತ್ರಾ ಲಠ್ಠಿ ದೀತಿಯ, 600 ಮೀ ಒಟದಲ್ಲಿ ಸೌಪರ್ಣಿಕಾ ಸೌಂಸುದ್ದಿ ತೃತೀಯ, ಹರ್ಡಲ್ಸನಲ್ಲಿ ಅತಿಕ ಕೊತಳಿ ಹಾಗೂ ಸ್ಪಂದನಾ ಅಮರಾಪೂರ ಪ್ರಥಮ, ಬಾಲಕಿಯರ ರಿಲೇ ಪ್ರಥಮ, ಚಕ್ರ ಎಸೆತ ರಶ್ಮಿ ದೇವರಮನಿ ಪ್ರಥಮ, ಬಾಲಕ, ಬಾಲಕಿಯರ ವಾಲಿಬಾಲನಲ್ಲಿ ಪ್ರಥಮ, ಬಾಲಕರ ಥ್ರೋಬಾಲನಲ್ಲಿ ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸತತ ಮೂರು ವರ್ಷ ಎಲ್ಲಾ ಕ್ರೀಡೆಗಳಲ್ಲಿ ಅತಿ ಹೆಚ್ಚು ಪ್ರಥಮ ಸ್ಥಾನ ಪಡೆದುಕೊಂಡ ಈ ವರ್ಷ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಸೋಮೈಯಾ ಶಿಶುನಿಕೇತನ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಿಆರ್ ಪಿ ಟಿ ಎಮ್ ನಾಯಿಕವಾಡಿ, ಶಾಲೆಯ ಅಧ್ಯಕ್ಷ ಬಿ ಆರ್ ಬಕ್ಷಿ ಸದಸ್ಯ ಡಾ. ವ್ಹಿ ಪಿ ಕಣವಿ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಾಲೆಯ ಮುಖ್ಯ ಗುರು ಬಿ ಎಸ್ ಶಿಳ್ಳೀನ ಹಾಗೂ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದರು. ಎಲ್ಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಬಿ ಕೆ ಕುರಾಡೆ ತರಬೇತಿ ನೀಡಿದ್ದಾರೆ.
ವರದಿ: ಸಂತೋಷ ಮುಗಳಿ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: