ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ್ದ ಐಎಎಸ್ ಅಧಿಕಾರಿ ದಂಪತಿ ವರ್ಗಾವಣೆ - Mahanayaka

ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ್ದ ಐಎಎಸ್ ಅಧಿಕಾರಿ ದಂಪತಿ ವರ್ಗಾವಣೆ

dehil
27/05/2022

ನವದೆಹಲಿ: ದೆಹಲಿಯ ತ್ಯಾಗರಾಜ್ ಸ್ಟೇಡಿಯಂನ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಎಜಿಎಂಯುಟಿ ಕೇಡರ್ ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ರಿಂಕು ದುಗ್ಗಾ ಅವರನ್ನು ದೆಹಲಿಯಿಂದ ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವಾಲಯವು ವರ್ಗಾಯಿಸಿದೆ.

AGMUT ಕೇಡರ್‌ ನ 1994-ಬ್ಯಾಚ್ ಐಎಎಸ್ ಅಧಿಕಾರಿ ಖಿರ್ವಾರ್ ಅವರನ್ನು ಲಡಾಖ್‌ಗೆ ಮತ್ತು ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ ಎಂದ ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

ವರದಿಗಳ ಪ್ರಕಾರ ಸಂಜೀವ್ ಖಿರ್ವಾರ್ ಮತ್ತು ಅವ ಪತ್ನಿ ಸ್ಟೇಡಿಯಂನಲ್ಲಿ ತಮ್ಮ ಸಾಕು ನಾಯಿಯನ್ನು ಕರೆದುಕೊಂಡು ಬಂದು ವಾಕ್ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟುಗಳು ಬೇಗನೆ ತಮ್ಮ ತರಬೇತಿಯನ್ನು ಮುಗಿಸಿ ಹೊರ ನಡೆಯಬೇಕಾಗಿತ್ತು.

“ನಾವು ಮೊದಲು 8, 8 – 8.30 ರವರೆಗೆ ತರಬೇತಿ ನೀಡುತ್ತಿದ್ದೆವು. ಆದರೆ ಈಗ, ಅಧಿಕಾರಿಯು ತನ್ನ ನಾಯಿಯನ್ನು ಸಂಜೆ 7 ಗಂಟೆಗೆ ಸ್ಟೇಡಿಯಂಗೆ ಕರೆದುಕೊಂಡು ಬಂದು ವಾಕ್ ಮಾಡುತ್ತಿದ್ದಾರೆ ಮತ್ತು ಕ್ರೀಡಾಳುಗಳನ್ನು ಹೊರಹೋಗುವಂತೆ ಹೇಳುತ್ತಿದ್ದಾರೆ. ನಮ್ಮ ತರಬೇತಿ ಮತ್ತು ಅಭ್ಯಾಸದ ದಿನಚರಿ ಅಸ್ತವ್ಯಸ್ತಗೊಂಡಿದೆ” ಎಂದು ತರಬೇತುದಾರರೊಬ್ಬರು ಪತ್ರಿಕೆಗೆ ತಿಳಿಸಿದ್ದರು.ಈ ವರದಿಯನ್ನು ಅನುಸರಿಸಿ ಗೃಹ ಸಚಿವಾಲಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದೆ.

2010 ರ ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾದ ಈ ಕೇಂದ್ರೀಯ ಕ್ರೀಡಾ ಸಂಕೀರ್ಣವು ಬಹು-ವ್ಯವಸ್ಥೆಯ ಸೌಲಭ್ಯವಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಕ್ರೀಡಾಪಟುಗಳು ಮತ್ತು ಫುಟ್‌ಬಾಲ್ ಆಟಗಾರರನ್ನು ಆಕರ್ಷಿಸುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೇನೆಯ ವಾಹನ ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯ

ಮೂತ್ರದಿಂದ ತಯಾರಾಗುವ ಬಿಯರ್: ಸೂಪರ್‌ ಟೇಸ್ಟ್ ಎನ್ನುತ್ತಿದ್ದಾರೆ ಮದ್ಯಪಾನಿಗಳು!

ಕ್ರೂಸ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್

ಸಾಮೂಹಿಕ ಅತ್ಯಾಚಾರದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ

ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

 

ಇತ್ತೀಚಿನ ಸುದ್ದಿ