ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ಜಟಾಪಟಿ: ಟ್ವೀಟ್ ನಿಂದ ಘಟನೆ ಬೆಳಕಿಗೆ!!
ಚಾಮರಾಜನಗರ: ಪ್ರವಾಸಿಗರ ನಡುವೆ ಜಟಾಪಟಿ ನಡೆದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾದ್ದರಿಂದ ಪೊಲೀಸರು ಎಫ್ಐಆರ್ ದಾಖಲಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೇರಳ ಮೂಲದ ಅರ್ಜುನ್ ಎಂಬವರಿಗೆ ಬೆಂಗಳೂರು ಮೂಲದ ನಾಲ್ವರು ಯುವಕರು ಅಡ್ಡಹಾಕಿ ಜಟಾಪಟಿ ನಡೆಸಿದ್ದರ ವೀಡಿಯೋವನ್ನು ಥರ್ಡ್ ಐ ಎಂಬ ಖಾತೆದಾರ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದರು.
ಟ್ವೀಟ್ ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಚಾಮರಾಜನಗರ ಪೊಲೀಸ್ ಸಿಬ್ಬಂದಿ ಜೊತೆಹೆ ಮಾತನಾಡಿ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಟ್ವೀಟರ್ ನಲ್ಲಿ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:
ಟ್ವಿಟರ್ ನಲ್ಲಿ ಥರ್ಡ್ ಐ ಖಾತೆದಾರ ವೀಡಿಯೋ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಮಿಶ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಯಾವ ಪ್ರವಾಸಿಗರೂ ಸುಖಾಸುಮ್ಮನೆ ಕಾರು ಅಡ್ಡಹಾಕಿ ಬೈಯ್ಯುವುದಿಲ್ಲ, ಕೇರಳ ಮೂಲದ ವ್ಯಕ್ತಿ ಏನೋ ಕಿರಿಕ್ ಮಾಡಿದ್ದರಿಂದ ಕುಪಿತಗೊಂಡು ಹೊಡೆದಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದು ಒಂದು ದೃಷ್ಟಿಕೋನದಿಂದ ತನಿಖೆ ನಡೆಸದೇ ಯುವಕರು ಯಾಕೆ ಆ ರೀತಿ ಮಾಡಿದರು ಎಂಬುದನ್ನೂ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ದೂರಿನಲ್ಲಿ ಏನಿದೆ: ಕಳೆದ ಜೂ.17 ರಂದು ಬೆಂಗಳೂರಿನಿಂದ ಕೇರಳಕ್ಕೆ ತೆರಳುವಾಗ ಯುವಕರ ಜೀಪಿಗೆ ಓವರ್ ಟೇಕ್ ಮಾಡಲು ಸ್ಥಳವಕಾಶ ಸಿಗದ ಹಿನ್ನೆಲೆಯಲ್ಲಿ ಏಕಾಏಕಿ ನನ್ನ ಕಾರಿಗೆ ಅಡ್ಡಹಾಕಿ ಹೊಡೆದಿದ್ದಾರೆ, ಡ್ಯಾಶ್ ಬೋರ್ಡ್ ಕ್ಯಾಮರಾ ಒಡೆದು ಹಾಕಲು ಯತ್ನಿಸಿದ್ದಾರೆ, ಕೆಲಸದ ಒತ್ತಡ ಇದ್ದಿದ್ದರಿಂದ ತಡವಾಗಿ ದೂರು ಕೊಡುತ್ತಿರುವುದಾಗಿ ಅರ್ಜುನ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw