ಎಟಿಎಂನಲ್ಲಿ ಹೊಸ  ಫೀಚರ್ ಪರಿಚಯಿಸಿದ ಎಸ್ ಬಿಐ: ಇದರ ಪ್ರಯೋಜನ ಏನು ಗೊತ್ತಾ? - Mahanayaka
5:05 AM Wednesday 11 - December 2024

ಎಟಿಎಂನಲ್ಲಿ ಹೊಸ  ಫೀಚರ್ ಪರಿಚಯಿಸಿದ ಎಸ್ ಬಿಐ: ಇದರ ಪ್ರಯೋಜನ ಏನು ಗೊತ್ತಾ?

sbi atm
26/10/2021

ನವದೆಹಲಿ: ಭಾರತದ ಅತೀ ದೊಡ್ಡ ಸರ್ಕಾರಿ ಬ್ಯಾಂಕ್  ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರ ಸುರಕ್ಷತೆಗೆ ಹೊಸದಾದ ಫೀಚರ್ ಗಳನ್ನು ಎಟಿಎಂನಲ್ಲಿ ಅಳವಡಿಸಿದ್ದು,  ಹಣ ಹಿಂದೆಗೆದುಕೊಳ್ಳುವ ಸಂದರ್ಭದಲ್ಲಿ ಆಗಬಹುದಾದ ವಂಚನೆಗಳನ್ನು ತಡೆಯಲು ಸೂಕ್ತ ಕ್ರಮವನ್ನು ಕೈಗೊಂಡಿದೆ.

ಓಟಿಪಿ ಆಧರಿತ ಅಥೆಂಟಿಕೇಶನ್ ನ್ನು ತನ್ನ ಎಟಿಎಂನಲ್ಲಿ ಪರಿಚಯಿಸಿರುವ ಎಸ್ ಬಿ ಐ, ನಮ್ಮ ಓಟಿಪಿ ಆಧರಿತ ನಗದು ಹಿಂಪಡೆತದ ವ್ಯವಸ್ಥೆಯು ವಂಚಕರ ವಿರುದ್ಧ ಲಸಿಕೆ ಇದ್ದಂತೆ. ವಂಚನೆಗಳಿಂದ ನಿಮ್ಮನ್ನು ರಕ್ಷಿಸುವುದು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಟ್ವೀಟ್ ಮಾಡಿದೆ.

ಎಟಿಎಂ ವಂಚನೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲೆಂದು 2020 ರಲ್ಲಿ ಓಟಿಪಿ ಆಧರಿತ ವ್ಯವಹಾರಗಳನ್ನು ಪರಿಚಯಿಸಲಾಗಿತ್ತು. ಈ ಮೂಲಕ ತನ್ನ ಎಟಿಎಂಗಳಲ್ಲಿ ನಗದು ಹಿಂಪಡೆತಕ್ಕೆ ಮತ್ತೊಂದು ಹಂತದ ಭದ್ರತೆಯ ವ್ಯವಸ್ಥೆಯನ್ನು ಎಸ್.ಬಿ.ಐ ಮಾಡಿದೆ.

ಗ್ರಾಹಕರು  ಬ್ಯಾಂಕ್ ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಓಪಿಪಿ ಬರಲಿದೆ. ಹೀಗೆ ಬಂದ ಓಟಿಪಿಯನ್ನು ಎಟಿಎಂನಲ್ಲಿ ನಗದು ಹಿಂಪಡೆಯುವ ಸಂದರ್ಭದಲ್ಲಿ ನಮೂದಿಸಿ ಹಣ ಹಿಂಪಡೆಯಬಹುದಾಗಿದೆ. ಈ ವ್ಯವಸ್ಥೆಯು ಫೇಕ್ ಎಟಿಎಂ ಕಾರ್ಡ್ ಅವ್ಯವಸ್ಥೆಯನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಇದರ ಸಾಧಕ—ಬಾಧಕಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕಾತಿ

ಬ್ರಾಹ್ಮಣರಿಗೆ ಉನ್ನತ ಹುದ್ದೆ, ದಲಿತ, ಬಿಲ್ಲವ, ಬಂಟರಿಗೆ ತ್ರಿಶೂಲ ವಿತರಣೆ | ಭಾಸ್ಕರ್ ಪ್ರಸಾದ್ ಕಿಡಿ

74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ

ಇತ್ತೀಚಿನ ಸುದ್ದಿ