ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನ ಘೋಷಣೆ - Mahanayaka
4:59 PM Wednesday 11 - December 2024

ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನ ಘೋಷಣೆ

bommai-budget1
04/03/2022

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಅನುಮೋದನೆ ನೀಡಲಾಗಿದ್ದು, ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ.

ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-2023ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

2022-23ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನವನ್ನು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ವಲಯವಾರು ಅನುದಾನದ ಮಾಹಿತಿ:

* ಆಹಾರ ಇಲಾಖೆ – 2,288 ಕೋಟಿ ರೂ. ಅನುದಾನ
* ವಸತಿ ಇಲಾಖೆ – 3,594 ಕೋಟಿ ರೂ. ಅನುದಾನ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ ರೂ. ಅನುದಾನ
* ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ. ಅನುದಾನ,
* ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ. ಅನುದಾನ
* ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ ಅನುದಾನ
* ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222 ಕೋಟಿ ರೂ. ಅನುದಾನ
* ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ. ಅನುದಾನ
* ಶಿಕ್ಷಣ ಇಲಾಖೆ – 31,980 ಕೋಟಿ ರೂ. ಅನುದಾನ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ – 17,325 ಕೋಟಿ ರೂ. ಅನುದಾನ,
* ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂ. ಅನುದಾನ
* ಕಂದಾಯ ಇಲಾಖೆ – 16,388 ಕೋಟಿ ರೂ. ಅನುದಾನ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂ. ಅನುದಾನ
* ಇಂಧನ ಇಲಾಖೆ – 12,655 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ಅಲ್ಲದೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಜ್ಯದಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು, ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಯತಪ್ಪಿ ಐದನೆ ಮಹಡಿಯಿಂದ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಗಂಭೀರ

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬೈಕ್‌ಗೆ ಟಿಪ್ಪರ್ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಭೀಕರ ಸ್ಫೋಟ: 11 ಮಂದಿ ಸಾವು; ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ಇತ್ತೀಚಿನ ಸುದ್ದಿ