ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ - Mahanayaka
3:17 AM Thursday 12 - December 2024

ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ

yathidra siddaramaya
06/06/2023

ಚಾಮರಾಜನಗರ: ಬಿಜೆಪಿಯವರ ಸ್ಥಿತಿ ತಾನು ಕಳ್ಳ ಪರರನ್ನು ನಂಬ ಎಂಬಂತಾಗಿದೆ ಎಂದು ಬಿಜೆಪಿಗರ ಪ್ರತಿಭಟನೆ ವಿರುದ್ಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತಾಡಿ, ಅವರಂತೆ ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ಕೊಟ್ಟಿದೆ ಎಂದುಕೊಂಡಿದ್ದರು ಆದರೆ ಎಲ್ಲಾ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದೆ ಎಂದು ಟಾಂಗ್ ಕೊಟ್ಟರು.

ಬಿಜೆಪಿ ಸರ್ಕಾರ 600 ಭರವಸೆ ಕೊಟ್ಟಿತ್ತು ಆದರೆ ಯಾವುದನ್ನು ಈಡೇರಿಸಿರಲಿಲ್ಲ, ಪ್ರಧಾನಿ ಮೋದಿ ಅವರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ, ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ, ನಾವು ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳು ಕಳೆದಿಲ್ಲ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಈ ಬಾರಿಯ ಚುನಾವಣೆಯು ನಮ್ಮ ಕಡೆ ಧರ್ಮ ಇತ್ತು ಅವರ ಕಡೆ ಅಧರ್ಮ ಇತ್ತು, ನಮ್ಮದು ಪ್ರಾಮಾಣಿಕ ಸೇವೆ ಅವರದು 40% ಭ್ರಷ್ಟಾಚಾರ, ನಮ್ಮದು ಬಡವರ ಪರ ಸರ್ಕಾರ ಅವರದು ಶ್ರೀಮಂತರ ಪರ ಒಲವು ಈ ಎಲ್ಲಾ ಅಂಶಗಳನ್ನು ಮತದಾರರಿಗೆ ತಿಳಿಸಿದೆವು, ಜನರು ನಮಗೆ ಆಶೀರ್ವಾದ ಮಾಡಿದರು, ಈಗ ಕಾರ್ಯಕರ್ತರ ಮೇಲೆ ಹೆಚ್ಚು ಜವಬ್ದಾರಿ ಇದ್ದು ಲೋಕಾ ಚುನಾವಣೆ ಒಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು, ಕಾಂಗ್ರೆಸ್ ಸಾಧನೆ ಬಗ್ಗೆ ಹೇಳಬೇಕು ಎಂದರು.

ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಹಿಡಿದು ಜನರನ್ನು ಕೆರಳಿಸುತ್ತಿದ್ದರು‌. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆ ಕೊಟ್ಟರು.

 ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ