ಔರಂಗಜೇಬ್ ಕುರಿತು ಹೇಳಿಕೆ: ಸದನದಿಂದ ಸಮಾಜವಾದಿ ಪಕ್ಷದ ಶಾಸಕ ಅಮಾನತು - Mahanayaka

ಔರಂಗಜೇಬ್ ಕುರಿತು ಹೇಳಿಕೆ: ಸದನದಿಂದ ಸಮಾಜವಾದಿ ಪಕ್ಷದ ಶಾಸಕ ಅಮಾನತು

05/03/2025

ಮೊಗಲ್ ದೊರೆ ಔರಂಗಜೇಬ್ ಕುರಿತು ಹೇಳಿಕೆ ನೀಡಿದ್ದಕ್ಕೆ ಮಹಾರಾಷ್ಟ್ರದ ವಿಧಾನಸಭೆಯಿಂದ ಸಮಾಜವಾದಿ ಪಕ್ಷದ ಶಾಸಕ ಅಬೂ ಅಝ್ಮಿ ಯವರನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ.

ಅಮಾನತುಗೊಳಿಸಿರುವುದಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ತಮ್ಮ ಪಕ್ಷದ ನಾಯಕನ ವಿರುದ್ಧದ ಕ್ರಮವು ‘ಸತ್ಯವನ್ನು ಮೌನಗೊಳಿಸುವ’ ಪ್ರಯತ್ನವಾಗಿದೆ ಎಂದಿದ್ದಾರೆ.

ಸಿದ್ದಾಂತದ ವಿಚಾರಕ್ಕೆ ಅಮಾನತು ಮಾಡುವುದಾದರೆ ವಾಕ್ ಸ್ವಾತಂತ್ರ್ಯ ಮತ್ತು ತಲೆ ಬಾಗುವುದರ ನಡುವೆ ಏನು ವ್ಯತ್ಯಾಸ ಇರಲಿದೆ? ನಮ್ಮ ಶಾಸಕರು ನಿರ್ಭೀತ ಬುದ್ದಿವಂತರು. ಅಮಾನತು ಸತ್ಯವನ್ನು ಮೌನಗೊಳಿಸಬಹುದು ಎಂದುಕೊಂಡರೆ, ಅದು ಅವರ ಅಪ್ರಭುದ್ದತೆಯಷ್ಟೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಕಳೆದ ವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾಸಕ ಅಝ್ಮಿ, “ಔರಂಗಜೇಬ್‌ರನ್ನು ಒಬ್ಬ ಕ್ರೂರ ಆಡಳಿತಗಾರ ಎಂದು ನೋಡಬಾರದು, ಬದಲಾಗಿ ದೇವಾಲಯಗಳನ್ನು ನಿರ್ಮಿಸಿದ ಮಹಾನ್ ಆಡಳಿತಗಾರ ಎಂದು ನೋಡಬೇಕು.

ಔರಂಗಜೇಬರ ಆಳ್ವಿಕೆಯಲ್ಲಿ, ಭಾರತದ ಗಡಿ ಅಫ್ಘಾನಿಸ್ತಾನ ಮತ್ತು ಬರ್ಮಾವರೆಗೆ (ಈಗ ಮ್ಯಾನ್ಮಾರ್) ವಿಸ್ತರಿಸಿತ್ತು” ಎಂದು ಹೇಳಿದ್ದರು.
ಅಲ್ಲದೆ, “ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಔರಂಗಜೇಬ್ ನಡುವಿನ ಯುದ್ಧವು ಧರ್ಮದ ವಿಷಯಕ್ಕೆ ನಡೆದಿರುವುದು ಎಂದು ನಾನು ನಂಬುವುದಿಲ್ಲ; ಅದೊಂದು ರಾಜಕೀಯ ಯುದ್ಧವಾಗಿತ್ತು” ಎಂದಿದ್ದರು.

ತನ್ನ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ್ದ ಅಝ್ಮಿ, “ಇತಿಹಾಸಕಾರರು ಏನು ಹೇಳಿದ್ದಾರೋ, ಅದನ್ನೇ ನಾನು ಹೇಳಿದ್ದೇನೆ. ಅದು ಛತ್ರಪತಿ ಶಿವಾಜಿ ಮಹಾರಾಜ್ ಅಥವಾ ಸಂಭಾಜಿ ಮಹಾರಾಜ್ ವಿರುದ್ಧ ನೀಡಿದ್ದ ಹೇಳಿಕೆಯಾಗಿರಲಿಲ್ಲ” ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ