ಮಗುವಿನ ತುಟಿಯನ್ನೇ ಕಚ್ಚಿ ಕತ್ತರಿಸಿದ ಬೀದಿನಾಯಿ: ಮಗುವಿನ ಸ್ಥಿತಿ ಗಂಭೀರ
21/12/2024
ಚಿಕ್ಕಮಗಳೂರು: 5 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ಮಾಡಿ, ಮಗುವಿನ ತುಟಿಯನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ.
ಏಂಜಲಿನ (5) ಬೀದಿನಾಯಿಗಳ ದಾಳಿಗೊಳಗಾದ ಮಗುವಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಆತಂಕಕ್ಕೊಳಗಾಗಿದ್ದಾರೆ. ಮಗುವಿನ ಮೇಲೆ ಭೀಕರವಾಗಿ ದಾಳಿ ನಡೆಸಿರುವ ಬೀದಿನಾಯಿ,ಮಗುವಿನ ತುಟಿಯನ್ನೇ ಕಚ್ಚಿ ಕತ್ತರಿಸಿದೆ.
ಬೀದಿನಾಯಿಯ ದಾಳಿಯಿಂದ ಅಸ್ವಸ್ಥಗೊಂಡಿರುವ ಮಗು ಗಂಭೀರ ಸ್ಥಿತಿಯಲ್ಲಿದೆ. ಮಗುವನ್ನು ಸದ್ಯ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: