ನಿಷೇಧಿತ ಪಿಟ್ ಬುಲ್ ನಾಯಿಯ ದಾಳಿಯಿಂದ ಬಾಲಕನನ್ನು ರಕ್ಷಿಸಿದ ಬೀದಿನಾಯಿಗಳು!

ಭಾರತದಲ್ಲಿ ನಿಷೇಧಿಸಿರುವ ಪಿಟ್ ಬುಲ್ ನಾಯಿಯ ದಾಳಿಗೆ ಬಾಲಕ ಗಂಭೀರ ಗಾಯಗೊಂಡ ಘಟನೆ ದೆಹಲಿಯ ಗಾಜಿಯಾಬಾದ್ ನಲ್ಲಿ ನಡೆದಿದೆ. ಗಾಯಳು ಬಾಲಕನನ್ನು ಅಲ್ತಾಫ್ ಎಂದು ಎಂದು ಗುರುತಿಸಲಾಗಿದೆ.
ಬಾಲಕನನ್ನುಆಕ್ರಮಣಕಾರಿ ಪಿಟ್ ಬುಲ್ ನಾಯಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬಾಲಕ ನೆಲಕ್ಕೆ ಬಿದ್ದು ನಾಯಿಯಿಂದ ತಪ್ಪಿಸಲು ಪ್ರಯತ್ನಿಸುತ್ತಿದ್ದ. ಆದರೂಈ ಘಟನೆಯನ್ನು ನೋಡುತ್ತಿದ್ದ ಯಾರು ಕೂಡ ಬಾಲಕನ ರಕ್ಷಣೆಗೆ ಮುಂದಾಗಲ್ಲಿಲ್ಲ.
ಆದರೆ ಪಿಟ್ ಬುಲ್ ನಾಯಿಯ ಆಕ್ರಮಣದಿಂದ ಬಾಲಕನನ್ನು ಬೀದಿನಾಯಿಗಳು ರಕ್ಷಿಸಿ ಬಾಲಕ ಮನೆಯೊಳಗೆ ಬರಲು ಸಹಕರಿಸಿದೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಅಪಾಯಕಾರಿ ತಳಿಯಾದ ಪಿಟ್ ಬುಲ್ ನಾಯಿಯನ್ನು ಸಾಕಬೇಡಿ ಎಂದು ನಾಯಿಯ ಮಾಲೀಕರಿಗೆ ಮನವಿ ಮಾಡಿದರೂ ಆ ಕುಟುಂಬ ಸ್ಥಳೀಯರ ಮಾತನ್ನು ಕೇಳದೆ ನಾಯಿಯನ್ನು ಸಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸದ್ಯ ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆಕ್ರಮಣಕಾರಿ ಪಿಟ್ ಬುಲ್ ಅನ್ನು ವಶಪಡಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth