ವಿಸಿಯ ಭಾಷಣ ಟೀಕೆ ಹಿನ್ನೆಲೆ: ವಿದ್ಯಾರ್ಥಿನಿ ಸಸ್ಪೆಂಡ್ - Mahanayaka

ವಿಸಿಯ ಭಾಷಣ ಟೀಕೆ ಹಿನ್ನೆಲೆ: ವಿದ್ಯಾರ್ಥಿನಿ ಸಸ್ಪೆಂಡ್

26/03/2025


Provided by

ದೆಹಲಿಯ ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿ ವಿಸಿಯ ಅನುಸಿಂಗ್ ರ ಭಾಷಣವನ್ನು ಟೀಕೆ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಸಸ್ಪೆಂಡ್ ಮಾಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಗಣರಾಜ್ಯೋತ್ಸವದ ಕುರಿತಂತೆ ವೈಸ್ ಚಾನ್ಸಲರ್ ಭಾಷಣ ಮಾಡಿದ್ದು ಅದರಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರಶಂಸಿಸಿದ್ದಾರೆ.


Provided by

ರಾಮಜನ್ಮಭೂಮಿ ಅಭಿಯಾನವು 525 ವರ್ಷಗಳಷ್ಟು ಹಳೆಯದಾಗಿದ್ದು ಈ ಮಂದಿರವನ್ನು ನಿರ್ಮಿಸುವುದಕ್ಕೆ ಉತ್ತರ ಪ್ರದೇಶ ಸರಕಾರ ನೀಡಿರುವ ಸಹಕಾರ ಮತ್ತು ಸೌಲಭ್ಯವನ್ನು ಕೂಡ ಅವರು ತಮ್ಮ ಭಾಷಣದಲ್ಲಿ ಶ್ಲಾಘಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿನಿಯು ತನ್ನ ಭಾಷಣವನ್ನು ತಪ್ಪಾಗಿ ಉಲ್ಲೇಖಿಸಿ ಟೀಕಿಸಿದ್ದಾರೆ ಮತ್ತು ಕೆಟ್ಟ ಪದವನ್ನು ಬಳಸಿದ್ದಾರೆ ಎಂದು ಹೇಳಿ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯನ್ನು ಸಸ್ಪೆಂಡ್ ಮಾಡಿದೆ.


Provided by

ಈ ವಿದ್ಯಾರ್ಥಿನಿ ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ ಭಾಗವಾಗಿದ್ದು ವೈಸ್ ಚಾನ್ಸಲರ್ ಅವರ ಭಾಷಣಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿ ಇಮೇಲ್ ಮಾಡಿದ್ದರು. ಇದೀಗ ಆಕೆಯನ್ನು ಆರು ತಿಂಗಳ ಕಾಲ ಸಸ್ಪೆಂಡ್ ಮಾಡಲಾಗಿದೆ.
ಇದೇ ವೇಳೆ ತನ್ನ ಮುಸ್ಲಿಂ ಐಡೆಂಟಿಟಿಯೇ ಸಸ್ಪೆಂಡ್ ಗೆ ಕಾರಣ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ನಾನು ಫೈನಲ್ ಇಯರ್ ವಿದ್ಯಾರ್ಥಿಯಾಗಿದ್ದೇನೆ. ಇದೆ ಮೇ ತಿಂಗಳಲ್ಲಿ ತಾನು ತನ್ನ ಪಠಣವನ್ನು ಒಪ್ಪಿಸಬೇಕಾಗಿದೆ. ಆದರೆ ತನ್ನನ್ನು ಆರು ತಿಂಗಳು ಸಸ್ಪೆಂಡ್ ಮಾಡಿರುವ ಕಾರಣ ತನಗೆ ಇದನ್ನು ಒಪ್ಪಿಸಲು ಸಾಧ್ಯವಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಲಾದ ಅಮಾನತ್ತಾಗಿದೆ. ಪ್ರಶ್ನಿಸುವುದು ಕ್ರಿಮಿನಲ್ ಅಪರಾಧವಾಗುವುದಾದರೆ ನಾವೇನು ಮಾಡಬಲ್ಲೆವು? ಇದು ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯಾಗಿದೆ ಎಂದು ಆಕೆ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ