ಲಕ್ಕಿ ಭಾಸ್ಕರ್ ಸಿನಿಮಾ ಎಫೆಕ್ಟ್: ದುಡ್ಡು ಮಾಡಲು ಹಾಸ್ಟೆಲ್ ಗೇಟ್ ಹತ್ತಿ ವಿದ್ಯಾರ್ಥಿಗಳು ಪರಾರಿ - Mahanayaka
3:21 PM Thursday 12 - December 2024

ಲಕ್ಕಿ ಭಾಸ್ಕರ್ ಸಿನಿಮಾ ಎಫೆಕ್ಟ್: ದುಡ್ಡು ಮಾಡಲು ಹಾಸ್ಟೆಲ್ ಗೇಟ್ ಹತ್ತಿ ವಿದ್ಯಾರ್ಥಿಗಳು ಪರಾರಿ

lucky bhaskar
12/12/2024

Lucky Baskhar Movie
ಆಂಧ್ರಪ್ರದೇಶ: ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಲಕ್ಕಿ ಭಾಸ್ಕರ್ ಚಿತ್ರದಿಂದ ಪ್ರೇರೇಪಣೆಗೊಂಡು, 4 ವಿದ್ಯಾರ್ಥಿಗಳು ದುಡ್ಡು ಮಾಡಲೆಂದು ಹಾಸ್ಟೆಲ್ ನ ಗೇಟ್ ಹಾರಿ ಎಸ್ಕೇಪ್ ಆಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಸೈಂಟ್ ಆನ್ಸ್ ಹೈಸ್ಕೂಲ್ ನಲ್ಲಿ ನಡೆದಿದೆ.

9ನೇ ತರಗತಿ ಓದುತ್ತಿರುವ ನಾಲ್ವರು ವಿದ್ಯಾರ್ಥಿಗಳು ಲಕ್ಕಿ ಭಾಸ್ಕರ್ ಸಿನಿಮಾದಲ್ಲಿ ಭಾಸ್ಕರ್ ದುಡ್ಡು ಮಾಡಿದಂತೆ ನಾವೂ ದುಡ್ಡು ಮಾಡಬೇಕು. ಇನ್ನೂ ಹೀಗೆಯೇ ಇದ್ದರೆ ಆಗುವುದಿಲ್ಲ ಎಂದು ಮಾತನಾಡಿಕೊಂಡು ಹಾಸ್ಟೆಲ್ ಗೇಟ್ ಏರಿ ಎಸ್ಕೇಪ್ ಆಗಿದ್ದಾರೆ.
ಹಾಸ್ಟೆಲ್ ನಲ್ಲಿದ್ದ ಬೋಡಪತಿ ಚರಣ್ ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂಬ ವಿದ್ಯಾರ್ಥಿಗಳು ಬೆಳಿಗ್ಗಿನ ವೇಳೆ 6:20ರ ಸುಮಾರಿಗೆ ಹಾಸ್ಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ಎಸ್ಕೇಪ್ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಣೆಯಾದ ಬಾಲಕರ ಪೈಕಿ ಕಿರಣ್ ಕುಮಾರ್ ಬಳಿ 12 ಸಾವಿರ ಹಣ ಇತ್ತು. ಅದರಲ್ಲಿ 8 ಸಾವಿರ ಹಾಸ್ಟೆಲ್ ಫೀಸ್ ಕಟ್ಟಿದ್ದ. ಉಳಿದ 4 ಸಾವಿರ ಹಣವನ್ನು ಎತ್ತಿಕೊಂಡು ಹೋಗಿದ್ದ.
ವಿದ್ಯಾರ್ಥಿಗಳು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳ ನೆರವಿನಿಂದ ತಕ್ಷಣವೇ ವಿಶೇಷ ತಂಡ ರಚಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮಂಗಳವಾರ ರಾತ್ರಿ ವಿಜಯವಾಡದಲ್ಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಾಪಸ್ ಕರೆತರಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ