‘ಮದುವೆ’ ಕುರಿತ ವಿದ್ಯಾರ್ಥಿಗಳ ಪ್ರಶ್ನೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನಂದ್ರು ಗೊತ್ತಾ.?
ಕಾಶ್ಮೀರಿ ವಿದ್ಯಾರ್ಥಿಗಳ ಜೊತೆ ರಾಹುಲ್ ಗಾಂಧಿ ನಡೆಸಿದ ಸಂಭಾಷಣೆ ಚರ್ಚೆಗೆ ಒಳಗಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಜೊತೆ ರಾಹುಲ್ ಗಾಂಧಿ ಅವರ ಮದುವೆಯ ಬಗ್ಗೆ ಮಾತಾಡಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ಮದುವೆಯ ಮರು ಪ್ರಶ್ನೆ ಹಾಕಿದ್ದಾರೆ. ಶ್ರೀನಗರದ ಓಪನ್ ಗ್ರೌಂಡ್ ನಲ್ಲಿ ನಡೆದ ಈ ಮಾತುಕತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.
ವಿವಿಧ ಕಾಲೇಜುಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರ ಜೊತೆ ರಾಹುಲ್ ಈ ಮಾತುಕತೆ ನಡೆಸಿದ್ದಾರೆ. ಕಾಶ್ಮೀರದಲ್ಲಿನ ವಿದ್ಯಾಭ್ಯಾಸದ ಸ್ವರೂಪ, ಮೂಲ ಸೌಕರ್ಯ, ಸಮಸ್ಯೆಗಳು, ಮೋದಿ ಆಡಳಿತ, ಮಾಧ್ಯಮ ಕಾರ್ಯನಿರ್ವಹಣೆ, ಕಾಶ್ಮೀರದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅನುಕೂಲಗಳು, ಮಹಿಳಾ ಸುರಕ್ಷಿತತೆ, ಕಾಶ್ಮೀರದ 370ನೇ ವಿಧಿ, ಭಾರತದ ರಾಜಕೀಯ ಇತ್ಯಾದಿ ವಿಷಯಗಳ ಸುತ್ತ ವಿದ್ಯಾರ್ಥಿನಿಯರ ಜೊತೆ ರಾಹುಲ್ ಸಂವಾದ ನಡೆಸಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಮತ್ತು ಕೊಲ್ಕತ್ತಾ ವೈದ್ಯಯ ಅತ್ಯಾಚಾರ ಮತ್ತು ಹತ್ಯೆಯ ವಿಷಯ ಪ್ರಸ್ತಾಪವಾದ ಬಳಿಕ ರಾಹುಲ್ ಅವರು ಈ ವಿದ್ಯಾರ್ಥಿನಿಯರ ಜೊತೆ ಮಾತಾಡುತ್ತಾ, ಮದುವೆ ಆಗುವ ಬಯಕೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿನಿಯರು ನಿಮಗೆ ಮದುವೆಯಾಗುವ ಬಯಕೆ ಇಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ. ನಾನು ಮದುವೆಯಾಗುವ ಯೋಜನೆ ಹಾಕಿಕೊಂಡಿಲ್ಲ, ಒಂದು ವೇಳೆ ಮದುವೆ ಆದರೆ ಅದು ಒಳ್ಳೆಯದು ಎಂದು ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth