ಸ್ಟಡಿ: ರಕ್ತದೊತ್ತಡಕ್ಕೆ ಪರಿಹಾರವನ್ನು ಸೂಚಿಸುವ ಅಧ್ಯಯನ ವರದಿ ಬಿಡುಗಡೆ
ನೀವು ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನಿಮ್ಮ ರಕ್ತದೊತ್ತಡಕ್ಕೆ ಪರಿಹಾರವನ್ನು ಸೂಚಿಸುವ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದೆ. ಅಧಿಕ ಔಷಧಗಳೋ ಅಥವಾ ಕಠಿನ ಡಯಟ್ಟೋ ಇಲ್ಲದೆಯೇ ಪ್ರತಿದಿನ ನಡೆಸಬಹುದಾದ ಸಣ್ಣ ಸಣ್ಣ ವ್ಯಾಯಾಮಗಳ ಮೂಲಕ ರಕ್ತದೊತ್ತಡವನ್ನು ಸಹಜಗೊಳಿಸಬಹುದು ಎಂದು ಅಧ್ಯಯನ ವರದಿ ತಿಳಿಸಿದೆ.
ಮೆಟ್ಟಿಲುಗಳನ್ನು ಹತ್ತುವುದು, ಓಟ ಅಥವಾ ಸೈಕಲ್ ತುಳಿಯುವುದು ಇತ್ಯಾದಿಯಾಗಿ 20ರಿಂದ 27 ನಿಮಿಷಗಳ ವ್ಯಾಯಾಮದಿಂದ ರಕ್ತದೊತ್ತಡ ಇಳಿಯುವುದಕ್ಕೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ. ವಿಶೇಷವಾಗಿ ಹೈಪರ್ ಟೆನ್ಶನ್ ಇರುವವರಿಗೆ ಇಂಥ ವ್ಯಾಯಾಮಗಳು ಬಹಳ ಅನುಕೂಲ ಎಂದು ವರದಿ ತಿಳಿಸಿದೆ.
ಸಿಡ್ನಿ ಯೂನಿವರ್ಸಿಟಿ ಮತ್ತು ಲಂಡನ್ನಿನ ಯೂನಿವರ್ಸಿಟಿ ಕಾಲೇಜ್ ನೇತೃತ್ವದ ಅಂತಾರಾಷ್ಟ್ರೀಯ ಅಕಾಡೆಮಿಕ್ ಸಂಸ್ಥೆಯಾದ ಪ್ರಾಸ್ಪೆಕ್ಟಿವ್ ಫಿಸಿಕಲ್ ಆಕ್ಟಿವಿಟಿ ಸಿಟ್ಟಿಂಗ್ ಅಂಡ್ ಸ್ಲೀಪ್ ಕನ್ ಸೋರ್ಸ್ ನ ಒಂದು ತಂಡವು ನಡೆಸಿದ ಅಧ್ಯಯನದಲ್ಲಿ ಈ ಫಲಿತಾಂಶ ಲಭ್ಯವಾಗಿದೆ. ಈ ಅಧ್ಯಯನ ವರದಿಯನ್ನು ಸರ್ಕ್ಯುಲೇಷನ್ ಜರ್ನಲ್ ಪ್ರಕಟಿಸಿದೆ.
ಬೇರೆ ಬೇರೆ ದೈಹಿಕ ಚಟುವಟಿಕೆಗಳು ರಕ್ತದೊತ್ತಡವನ್ನು ಹೇಗೆ ಬಾಧಿಸುತ್ತದೆ ಎಂಬ ಬಗ್ಗೆ ಈ ಅಧ್ಯಯನವನ್ನು ನಡೆಸಲಾಗಿತ್ತು. ಸಂಶೋಧನಾ ತಂಡವು ಐದು ರಾಷ್ಟ್ರಗಳ 14761 ಸೇವಾ ಕಾರ್ಯಕರ್ತರಿಂದ ಪಡೆದ ಡಾಟಾದ ಮೂಲಕ ಈ ವರದಿಯನ್ನು ತಯಾರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj