ಪ್ರವಾಸಿಗರ ಮೊಂಡತನ: ಇಲ್ಲಿಂದ ಬಿದ್ರೆ 2–3 ಸಾವಿರ ಅಡಿ ಆಳದ ಪ್ರಪಾತದಲ್ಲಿ ಹೆಣ ಸಿಗಬಹುದಷ್ಟೆ!
ಚಿಕ್ಕಮಗಳೂರು: ನೀವು ಹೇಳೋದ್ ಹೇಳ್ತಾ ಇರಿ… ನಾವು ಮಾಡೋದು ಮಾಡ್ತೀರ್ತೀವಿ ಇದು, ಕಾಫಿನಾಡ ಮಲೆನಾಡ ಜಲಪಾತಗಳ ಬಳಿ ಪ್ರವಾಸಿಗರ ಮೊಂಡತನ. 2-3 ಸಾವಿರ ಅಡಿ ಆಳದ ಪ್ರಪಾತದ ಜಲಪಾತಗಳ ಬಳಿ ಪ್ರವಾಸಿಗರು ಹುಚ್ಚಾಟವಾಡುತ್ತಿದ್ದು, ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ರಾಣಿಝರಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಗಡಿಭಾಗದಲ್ಲಿ ಬರುವ ಬಂಡಾಜೆ, ಫಾಲ್ಸ್ ಗಳ ಬಳಿ ಪ್ರವಾಸಿಗರ ಬೇಜವಾಬ್ದಾರಿ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ವೀಕ್ ಎಂಡ್ ನಲ್ಲಿ 2–3 ಸಾವಿರ ಪ್ರವಾಸಿಗರು ಬರುವ ಸುಂದರ ನೈಸರ್ಗಿಕ ತಾಣ ಇದಾಗಿದೆ. ಇಲ್ಲಿ ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ಕುಳಿತು, ನಿಂತು ಹುಚ್ಚುತನದ ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನರಾಗುತ್ತಿದ್ದಾರೆ. ಅಪ್ಪಿತಪ್ಪಿ ಕೆಳಗೆ ಬಿದ್ರೆ 2-3 ಸಾವಿರ ಅಡಿ ಪ್ರಪಾತದ ಪಾಲಾಗೋದಂತು ಗ್ಯಾರಂಟಿ. ಇಲ್ಲಿಂದ ಬಿದ್ರೆ ಮೃತದೇಹ ಸಿಗಬೇಕಾದ್ರೆ ವಾರಗಟ್ಟಲೆ ಹುಡುಕಬೇಕಾಗುತ್ತದೆ.,
ಇಲ್ಲಿ ಪ್ರವಾಸಿಗರು ಸಿನಿಮಾಗಳಲ್ಲಿ ಮಾಡಿದಂತೆ ಫೋಟೋಗಳನ್ನು ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಸಾವಿನ ಸವಾರಿಯ ಜಾಗ, ಸ್ವಲ್ಪ ಯಾಮಾರಿದ್ರು ನಡೆಯೋದು ಘನ ಘೋರವಾಗಿದೆ. ಇದೆಲ್ಲದರ ಅರಿವಿದ್ದರೂ ಪ್ರವಾಸಿಗರ ವರ್ತನೆ ಆತಂಕ ಸೃಷ್ಟಿಸುತ್ತಿದೆ.
ಪೊಲೀಸರು, ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರೂ ಹುಚ್ವು ಪ್ರವಾಸಿಗರು ಯಾರ ಮಾತೂ ಕೇಳುತ್ತಿಲ್ಲ. ಕೆಲವರಂತೂ ಮದ್ಯ ಸೇವಿಸಿ, ಗಾಂಜಾ ಹೊಡೆದ ಮತ್ತಿನಲ್ಲಿ ಈ ಭಾಗಕ್ಕೆ ಬರುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: