ನೇಮಕಾತಿ ಪರೀಕ್ಷೆಯಲ್ಲಿ ಮಾಡಿದ್ರು ವಂಚನೆ: ಅಗ್ರಸ್ಥಾನ ಪಡೆದ ಸಬ್ ಇನ್ಸ್ ಪೆಕ್ಟರ್ ಗಳ ಮಹಾಮೋಸ ಬಯಲು - Mahanayaka

ನೇಮಕಾತಿ ಪರೀಕ್ಷೆಯಲ್ಲಿ ಮಾಡಿದ್ರು ವಂಚನೆ: ಅಗ್ರಸ್ಥಾನ ಪಡೆದ ಸಬ್ ಇನ್ಸ್ ಪೆಕ್ಟರ್ ಗಳ ಮಹಾಮೋಸ ಬಯಲು

07/03/2024

ಅನ್ಯಾಯದ ವಿಧಾನಗಳ ಮೂಲಕ ಕೆಲಸವನ್ನು ಪಡೆದ ಆರೋಪ ಹೊತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಜೈಪುರ ನ್ಯಾಯಾಲಯದ ನ್ಯಾಯಪೀಠದ ಮುಂದೆ ಹಾಜರುಪಡಿಸಲು ಕರೆತಂದಾಗ ವಕೀಲರು ವಿರೋಧ ವ್ಯಕ್ತಪಡಿಸಿದ ಘಟನೆ ‌ನಡೆದಿದೆ.

ನಕಲಿ ಅಭ್ಯರ್ಥಿಯನ್ನು ಬಳಸಿಕೊಂಡು 2021 ರಲ್ಲಿ ಸಬ್ ಇನ್ಸ್ ಪೆಕ್ಟರ್ (ಎಸ್ಐ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಆರೋಪದ ಮೇಲೆ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಬಂಧಿಸಿದ 15 ಸಬ್ ಇನ್ಸ್ ಪೆಕ್ಟರ್ ಗಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಆರೋಪಿಗಳಲ್ಲಿ ಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದವರು ಸೇರಿದ್ದಾರೆ.

ಜೈಪುರ, ಅಜ್ಮೀರ್, ಬೀವಾರ್ ಮತ್ತು ಕಿಶನ್‌ಗಡ್ ಸೇರಿದಂತೆ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಎಸ್ಒಜಿ ದಾಳಿ ನಡೆಸಿತ್ತು. ಅಲ್ಲಿ ತರಬೇತಿ ಸಬ್ ಇನ್ಸ್ ಪೆಕ್ಟರ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೈಪುರವೊಂದರಲ್ಲೇ ಹದಿಮೂರು ಸಬ್ ಇನ್ಸ್ ಪೆಕ್ಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಎಸ್ಐಗಳ ನೇಮಕಾತಿಗೆ ಸಂಬಂಧಿಸಿದಂತೆ 20 ಪ್ರಕರಣಗಳನ್ನು ಗುರುತಿಸಲಾಗಿದೆ. 2021 ರಲ್ಲಿ ನಡೆದ ಎಸ್ಐ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಗಿದೆ ಎಂದು ಎಸ್ಒಜಿ ಹೆಚ್ಚುವರಿ ಮಹಾನಿರ್ದೇಶಕ ವಿ.ಕೆ.ಸಿಂಗ್ ತಿಳಿಸಿದ್ದಾರೆ.

2021 ರಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಮತ್ತು ಪ್ರಸ್ತುತ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 859 ಜನರಲ್ಲಿ 300-400 ಅಭ್ಯರ್ಥಿಗಳನ್ನು ಮೋಸದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜಸ್ಥಾನ ಸಚಿವ ಕಿರೋಡಿ ಲಾಲ್ ಮೀನಾ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ