ಕೇಂದ್ರ ಸರ್ಕಾರದಿಂದಲೇ ಆರ್ಥಿಕತೆ ಬಗ್ಗೆ ತಪ್ಪು ಮಾಹಿತಿ: ಸುಬ್ರಹ್ಮಣ್ಯಂ ಸ್ವಾಮಿ ಸ್ಪೋಟಕ ಹೇಳಿಕೆ
ದೇಶದ ಆರ್ಥಿಕತೆಯ ಬಗ್ಗೆ ಕೇಂದ್ರ ಸರಕಾರ ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯು ಬಿಜೆಪಿಗೆ ಇರಿಸು ಮುರಿಸನ್ನುಂಟು ಮಾಡಿದೆ. ಅಲ್ಲದೆ ಆರ್ಥಿಕತೆಯ ಬಗ್ಗೆ ಶೀಘ್ರದಲ್ಲಿ ಅಂಕಿ ಅಂಶಗಳನ್ನು ಪುರಾವೆಯಾಗಿ ನೀಡುವೆ ಎಂದು ಅವರು ಹೇಳಿದ್ದು ಈ ಬಗ್ಗೆ ಬಿಜೆಪಿಯಲ್ಲಿ ತಳಮಳ ಪ್ರಾರಂಭವಾಗಿದೆ. ಈ ಕುರಿತಂತೆ ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಭಾರತದ ಆರ್ಥಿಕ ಅಂಕಿ ಅಂಶಗಳನ್ನು ಕೂಲಂಕಶವಾಗಿ ವಿಶ್ಲೇಷಿಸಿದ್ದೇನೆ. ಭಾರತದ ಪ್ರಗತಿಪೂರ್ಣ ಆರ್ಥಿಕತೆಯ ಬಗ್ಗೆ ಮಾತಾಡುವುದು ಆಧಾರರಹಿತವಾಗಿದೆ ಎಂದಿದ್ದಾರೆ.
ಶೀಘ್ರದಲ್ಲೇ ನಾನು ಅಂಕಿ ಅಂಶ ಬಹಿರಂಗಪಡಿಸುತ್ತೇನೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಜಿಡಿಪಿಯ ಬೆಳವಣಿಗೆಯ ದರವು ಕೊರೋನಾದಿಂದ ಚೇತರಿಸಿಕೊಳ್ಳುವುದು ಕಮ್ಮಿಯಾಗಿದೆ. ಇದು ನೆಹರು ಅವಧಿಗಿಂತ ಕಡಿಮೆಯಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw