ಮಾನವರಹಿತ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದ ಭಾರತ
ಭಾರತದ ಮಾನವರಹಿತ ವೈಮಾನಿಕ ವಾಹನದ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶುಕ್ರವಾರ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಹಾರಾಟ ನಡೆಸಿತು.
ವಿಮಾನದ ಟೇಕ್-ಆಫ್, ನ್ಯಾವಿಗೇಷನ್ ಮತ್ತು ಲ್ಯಾಂಡಿಂಗ್ ಸುಗಮವಾಗಿತ್ತು. ಭವಿಷ್ಯದಲ್ಲಿ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಈ ವಿಮಾನ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ದೇಶದ ರಕ್ಷಣಾ ತಂತ್ರಜ್ಞಾನಗಳ ಮೇಲೆ ಸ್ವಾವಲಂಬನೆಯತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು DRDO ಹೇಳಿಕೆಯಲ್ಲಿ ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ ಡಿಒಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. “ಚಿತ್ರದುರ್ಗ ಎಟಿಆರ್ ನಿಂದ ಮಾನವರಹಿತ ಯಶಸ್ವಿ ಚೊಚ್ಚಲ ಹಾರಾಟಕ್ಕಾಗಿ ಡಿಆರ್ ಡಿಒಗೆ ಅಭಿನಂದನೆಗಳು. ಇದು ಸ್ವಾಯತ್ತ ವಿಮಾನಗಳತ್ತ ಪ್ರಮುಖ ಮೈಲುಗಲ್ಲಾಗಿದೆ, ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಸ್ವಾವಲಂಬಿ ಭಾರತಕ್ಕೆ ದಾರಿ ಮಾಡಿಕೊಡುತ್ತದೆ.”ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉದ್ದವಾಗಿ ಕೂದಲು ಬೆಳೆಸಿದ ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ ಪ್ರಯೋಗ!
ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!
ಅನಾರೋಗ್ಯದಿಂದ ಬೇಸತ್ತು ಪುಟ್ಟ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ
ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ!
ಭಾರೀ ಮಳೆ ಹಿನ್ನೆಲೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ