ಟೊಮೇಟೋಗೆ ದಿಢೀರ್ ಬೆಲೆ ಕುಸಿತ: ರಸ್ತೆ ಬದಿ ಟೊಮೆಟೋ ಸುರಿದ ರೈತ
ಬಳ್ಳಾರಿ: ಟೊಮೇಟೋಗೆ ದಿಢೀರ್ ಬೆಲೆ ಕುಸಿತವಾದ ಹಿನ್ನೆಲೆ ರೈತರೊಬ್ಬರು ತಾನು ಬೆಳೆದ ಟೊಮೆಟೋವನ್ನು ರಸ್ತೆ ಬದಿ ಸುರಿದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ನಿಂಬಳಗರೆ ರೈತ ಗಾಬರಿ ಕಾಡಪ್ಪ 3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. 15 ವಿವಿಧ ಮಾರುಕಟ್ಟೆಗಳಲ್ಲಿ ಬಾಕ್ಸ್ ವೊಂದಕ್ಕೆ 200ರಿಂದ 300 ರೂಪಾಯಿಗೆ ಮಾರಾಟ ಮಾಡಿದ್ದರು. ಆದರೆ ಹರಪನಹಳ್ಳಿ ಮಾರುಕಟ್ಟೆಯಲ್ಲಿ ಬಾಕ್ಸ್ ಗೆ ಕೇವಲ 30ರಿಂದ 50 ರೂಪಾಯಿಗೆ ಕೇಳಿದ್ದರು, ಇದರಿಂದ ಬೇಸತ್ತು ಟೊಮೆಟೋ ವಾಪಸ್ ತಂದು ತನ್ನ ಜಮೀನಿನ ಬಳಿಯ ರಸ್ತೆಯ ಪಕ್ಕದಲ್ಲಿ ಸುರಿದಿದ್ದಾರೆ.
ಟೊಮೆಟೋ ಬಿಡಿಸಲು ಹೆಂಗಸರಿಗೆ 200 ಗಂಡಸರಿಗೆ 500 ಕೂಲಿ ನೀಡಬೇಕು, ಸಾಗಿಸಲು ವಾಹನ ಬಾಡಿಗೆ ನೀಡಬೇಕು. ಸಿಗುವ ಸಣ್ಣ ಬೆಲೆಯಲ್ಲಿ ಈ ಖರ್ಚು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: