ಖಾಸಗಿ ಸುದ್ದಿವಾಹಿನಿಯ ಸುದ್ದಿ ನಿರೂಪಕರನ್ನು “ಹುಚ್ಚ” ಎಂದು ಕರೆದು ಅವಮಾನಿಸಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ - Mahanayaka
3:51 PM Wednesday 5 - February 2025

ಖಾಸಗಿ ಸುದ್ದಿವಾಹಿನಿಯ ಸುದ್ದಿ ನಿರೂಪಕರನ್ನು “ಹುಚ್ಚ” ಎಂದು ಕರೆದು ಅವಮಾನಿಸಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ

27/01/2021

ಬೆಂಗಳೂರು: ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರು ಕನ್ನಡ ಖಾಸಗಿ ಸುದ್ದಿವಾಹಿನಿಯೊಂದರ ಸುದ್ದಿ ನಿರೂಪಕರನ್ನು “ಹುಚ್ಚ” ಎಂದು ನಿಂದಿಸಿದ ಘಟನೆ ನಿನ್ನೆ ನಡೆದಿದ್ದು, ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ನಿರೂಪಕ ಹಾಗೂ ಉಗ್ರಪ್ಪ ಅವರ ನಡುವೆ ವಾಗ್ವಾದ ನಡೆದಿದೆ.

“ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಡಿ ಎಂದ್ರೆ, ಊರೆಲ್ಲ ಮಾತನಾಡುತ್ತಿದ್ದೀರಿ” ಎಂದು ಸುದ್ದಿ ನಿರೂಪಕ ಉಗ್ರಪ್ಪ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ. ಉಗ್ರಪ್ಪ ಅವರು ಉತ್ತರಿಸಲು ಪ್ರಯತ್ನಿಸಿದರೂ, ಸುದ್ದಿ ನಿರೂಪಕರ ಆಕ್ರೋಶ ತಣಿದಿರಲಿಲ್ಲ. ಈ ವೇಳೆ ಉಗ್ರಪ್ಪ ಕೂಡ ಆಕ್ರೋಶಗೊಂಡು “ನೀನು ಹುಚ್ಚನ ಥರ ಮಾತನಾಡಬೇಡ” ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನೀನು ಪತ್ರಕರ್ತನಾ? ನಿನಗೆ ಏನಾದರೂ ಬದ್ಧತೆ ಇದೆಯಾ? ನಾನ್ ಸೆನ್ಸ್” ಎಂದು ಸುದ್ದಿ ನಿರೂಪಕಗೆ ಉಗ್ರಪ್ಪ ಅವಮಾನಿಸಿದ್ದಾರೆ. ಭಾರತ ಧ್ವಜ ಇರುವ ಪ್ರದೇಶದಲ್ಲಿ ರೈತರು ಬಾವುಟ ಹಾರಿಸಿದ್ದಾರೆ ಎಂದು ಉಗ್ರಪ್ಪ ಅವರನ್ನು ಸುದ್ದಿ ನಿರೂಪಕ ಪದೇ ಪದೇ ಪ್ರಶ್ನಿಸಿದ್ದಾರೆ. ಉತ್ತರ ನೀಡಲೂ ಅವಕಾಶ ನೀಡದೇ ಪ್ರಶ್ನಿಸುತ್ತಿರುವ ಸುದ್ದಿ ನಿರೂಪಕನ ವಿರುದ್ಧ ಆಕ್ರೋಶಗೊಂಡ ಉಗ್ರಪ್ಪ,  “ನೀನು ಹುಚ್ಚನ ಥರ ಮಾತನಾಡಬೇಡ ಕಣಯ್ಯ” ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಇತ್ತೀಚಿನ ಸುದ್ದಿ