ಸಚಿವ ಸುಧಾಕರ್ ಕಡೆಯಿಂದಲೂ ಪತ್ರಕರ್ತರಿಗೆ ಎಣ್ಣೆ, ದುಬಾರಿ ಉಡುಗೊರೆ!
ಬೆಂಗಳೂರು: ರಾಜ್ಯ ಸರ್ಕಾರವು ಪತ್ರಕರ್ತರಿಗೆ ಲಂಚ ನೀಡಿರುವ ಆರೋಪ ಇನ್ನೂ ಹಸಿಯಾಗಿರುವಾಗಲೇ ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದ್ದು, ಸಚಿವ ಸುಧಾಕರ್ ಪತ್ರಕರ್ತರಿಗೆ ಹಣ, ಹೆಂಡ ಹಂಚಿರುವ ಗಂಭೀರ ಆರೋಪ ಮಾಡಿದೆ.
ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ. ಸುಧಾಕರ್ ಅವರೇ, ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್‌ನಲ್ಲಿ? ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ ಎಂದು ಪತ್ರಕರ್ತರಿಗೆ ಹಂಚಲಾದ ಸ್ಕಾಚ್ ಬಾಟಲಿ ಹಾಗೂ ಇನ್ನಿತರ ಉಡುಗೊರೆಗಳ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಸಚಿವ ಸುಧಾಕರ್ ಅವರ ಕಡೆಯಿಂದಲೂ ಪತ್ರಕರ್ತರಿಗೆ ದುಬಾರಿ ಬೆಲೆ ಲಂಚ ರೂಪದ ಉಡುಗೊರೆ ನೀಡಿರುವ ಸಂಗತಿ ಹೊರಬಂದಿದೆ. ಸುಧಾಕರ್ ಅವರೇ ಅವರೇ, ಏಕೆ ಈ ಬಗ್ಗೆ ತಾವು ತುಟಿ ಬಿಚ್ಚುತ್ತಿಲ್ಲ? ಅಕ್ರಮ ಮುಚ್ಚಿಕೊಳ್ಳಲು ಸರ್ಕಾರ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎನ್ನಲು ಪತ್ರಕರ್ತರಿಗೆ ಲಂಚ ನೀಡಿದ ಈ ಪ್ರಕರಣವೇ ನಿದರ್ಶನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka