ಕಲ್ಲು ಸಕ್ಕರೆ ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳು ಮಾಯ!
ಒಂದು ಕಾಲದಲ್ಲಿ ಜನರ ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಒಂದಾಗಿದ್ದ ಕಲ್ಲುಸಕ್ಕರೆ ಈಗಿನ ಕಾಲದಲ್ಲಿ ಮರೆಯಾಗುತ್ತಿದೆ. ಈಗೀಗ ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಜನ ಓಡುತ್ತಿದ್ದಾರೆ. ಆದರೆ ಅಂದಿನ ಕಾಲ ಹಾಗಿರಲಿಲ್ಲ. ಕೆಮ್ಮು, ನೆಗಡಿ, ಕಫ, ಜ್ವರ ಮೊದಲಾದ ಸಮಸ್ಯೆಗಳು ಬಂದೊಡನೆಯೇ ಮನೆಯಲ್ಲಿಯೇ ಮದ್ದು ಮಾಡಿ ಸೇವಿಸುತ್ತಿದ್ದರು. ಈ ಮದ್ದುಗಳಲ್ಲಿ ಪ್ರಮುಖವಾಗಿದ್ದದ್ದು ಇದೇ ಕಲ್ಲು ಸಕ್ಕರೆ.
ಕಲ್ಲು ಸಕ್ಕರೆ ರುಚಿಯಲ್ಲಿ ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಅದು ಅಷ್ಟೇ ಉತ್ತಮವಾಗಿದೆ. ಇದರಲ್ಲಿ ಹಲವಾರು ಆರೋಗ್ಯಕರ ಅಂಶಗಳಿವೆ. ಕಲ್ಲು ಸಕ್ಕರೆ ಸೇವನೆಯಿಂದ ಗಂಟಲು ನೋವು, ಒಣಕೆಮ್ಮು, ಹಸಿಕೆಮ್ಮು ತಕ್ಷಣವೇ ಪರಿಹಾರವಾಗುತ್ತದೆ.
ಕಲ್ಲು ಸಕ್ಕರೆ ಸೇವನೆ ಜೀರ್ಣ ಕ್ರಿಯೆಗೂ ಉತ್ತಮವಾಗಿದೆ. ಇದರ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ ರಕ್ತ ಹೀನತೆಯನ್ನು ಇದು ಕಡಿಮೆ ಮಾಡುತ್ತದೆ.
ಕಲ್ಲು ಸಕ್ಕರೆಯನ್ನು ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಅಂದ ಹಾಗೆ ಕಲ್ಲು ಸಕ್ಕರೆ ಸೇವಿಸಿದ ತಕ್ಷಣವೇ ನೀರು ಸೇವಿಸಬಾರದು. ಹೀಗೆ ಮಾಡುವುದರಿಂದ ಹಸಿಕೆಮ್ಮು ಹೆಚ್ಚಾಗಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳಿಗಾಗಲಿ ಕ್ಲಿಕ್ ಮಾಡಿ: https://www.mahanayaka.in/category/
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka